ಗುಜರಾತ್ ನಲ್ಲಿ ಆಕಾಶದಿಂದ ಬಿದ್ದ ಲೋಹದ ಚೆಂಡುಗಳು…
ಗುಜರಾತ್ ರಾಜ್ಯದ ಹಲವು ಪ್ರದೇಶಗಳಲ್ಲಿ ಆಕಾಶದಿಂದ ಲೋಹದ ಚೆಂಡುಗಳು ಬಿದ್ದು ಸ್ಥಳಿಯರನ್ನ ಕಂಗೆಡಿಸಿದ ಘಟನೆ ನಡೆದಿದೆ. ಗುರುವಾರ ಸಂಜೆ ಗುಜರಾತ್ನ ಆನಂದ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿ ಬಂದ ಹಿನ್ನಲೆ ಭೂಕಂಪದ ಭಯದಿಂದ ನಿವಾಸಿಗಳು ತಮ್ಮ ಮನೆಗಳಿಂದ ಬಂದಿದ್ದಾರೆ. ಆಕಾಶದಿಂದ ಉದುರಿದ ನಿಗೂಢ ಲೋಹದ ವಸ್ತುಗಳನ್ನ ಉಪಗ್ರಹದ ತುಣುಕುಗಳು ಎಂದು ನಂಬಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ವಸ್ತು ಏನು ಎಂದು ಖಚಿತಪಡಿಸಿಕೊಳ್ಳಲು ಲೋಹದ ಚೆಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸುಮಾರು 5 ಕೆಜಿ ತೂಕದ ಕಪ್ಪು ಲೋಹದ ಚೆಂಡು ಸಂಜೆ 4:45 ರ ಸುಮಾರಿಗೆ ಭಲೇಜ್ ಪ್ರದೇಶದಲ್ಲಿ ಮೊದಲು ಬಿದ್ದಿದೆ. ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಇದೇ ರೀತಿಯ ಘಟನೆಗಳು ಪುನರಾವರ್ತಿತವಾಗಿವೆ.
ಅದೃಷ್ಟವಶಾತ್ ಲೋಹದ ವಸ್ತುಗಳು ಮನೆಯಿಂದ ದೂರ ಬಿದ್ದಿದ್ದರಿಂದ ಯಾರಿಗೂ ಯಾವುದೇ ಅಪಾಯಗಳಾಗಿಲ್ಲ.