ಮೈಸೂರು ಗುಂಬಜ್ ಮಾದರಿಯ ಬಸ್ ನಿಲ್ದಾಣಕ್ಕೆ ಕೊನೆಗೂ ತೆರವು…
ಮೈಸೂರಿನಲ್ಲಿ ಭಾರೀ ವಾಗ್ವಾದಕ್ಕೆ ಕಾರಣವಾಗಿದ್ದ ಬಸ್ ನಿಲ್ದಾಣ ವಿವಾದ ಕೊನೆಗೂ ಅಂತ್ಯ ಕಂಡಿದೆ. ಶಾಸಕ ರಾಮದಾಸ್ ಬಸ್ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲಿದ್ದ ಎರಡು ಚಿಕ್ಕ ಗುಂಬಜ್ಗಳನ್ನು ತೆರವುಗೊಳಿಸಿದ್ದಾರೆ.
ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ಅವರು ನಡುವೆ ಬಸ್ ಮೇಲಿನ ಗುಂಬಜ್ ಶೀತಲ ಸಮರಕ್ಕೆ ಕಾರಣವಾಗಿತ್ತು. ಗುಂಬಜ್ ತೆರವುಗೊಳಿಸಿದ ನಂತರ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಎರಡು ಗುಂಬಜ್ ತೆರವುಗೊಳಿಸಿದ ರಾಮದಾಸ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ತಮ್ಮ ಮೂವತ್ತು ವರ್ಷದ ರಾಜಕಾರಣದಲ್ಲಿ ಈ ರೀತಿಯ ವಿವಾದ ಎಂದೂ ಸಹ ನಡೆದಿರಲಿಲ್ಲ. ಅನಾವಶ್ಯಕವಾಗಿ ಧರ್ಮದ ಲೇಪನ ಮಾಡುವ ಯತ್ನಗಳು ನಡೆದಿದ್ದವೂ ಎಂಬ ಆರೋಪವನ್ನು ತಮ್ಮ ಪ್ರಕಟಣೆಯಲ್ಲಿ ಮಾಡಿದ್ದರು.
ಟ್ಟರ್ನಲ್ಲಿ ಫೋಟೋ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ, ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
mysuru Bus stand: Mysuru Gumbaj type bus stand is finally cleared…