Mysuru Road: ಲೈಟು ಹಾಕಿಸಿದ ಎರಡೇ ದಿನಕ್ಕೆ MCB ಸ್ವಿಚ್ಚ ಕದ್ದ ಕಳ್ಳರು…
ಮೈಸೂರಿನ ರಿಂಗ್ ರೋಡ್ ನಲ್ಲಿ ಹಾಕಲಾಗಿದ್ದ ವಿದ್ಯುತ್ ದೀಪಗಳಲ್ಲಿ MCB ಸ್ವಿಚ್ ಗಳಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಪೊಟೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಲೈಟು ಬೇಕು ಅಂದ್ರಿ, ಶ್ರಮಪಟ್ಟು ಹಾಕಿಸಿದೆ. ಎರಡೇ ದಿನಗಳಲ್ಲಿ ಸಾತಗಳ್ಳಿ ಬಳಿ ಕಳ್ಳರ ಕಾಟ ಶುರುವಾಗಿದೆ. MCB ಸ್ವಿಚ್ಸ್ ಕದ್ದು, ವಿದ್ಯುತ್ ಸಂಪರ್ಕ ತೆಗೆಯುತ್ತಿದ್ದಾರೆ. ಇಂದಿನಿಂದ ರಾತ್ರಿ ಗಸ್ತು ಆರಂಭಿಸುತ್ತಿದ್ದೇನೆ ಮತ್ತು CCTV ಕ್ಯಾಮೆರಾ ಅಳವಡಿಸಲು ಇಂಡಿಯನ್ ಬ್ಯಾಂಕ್ ನಿಂದ 5 ಲಕ್ಷ ಡಿಡಿ ಕೊಡಿಸಿದೆ ಎಂದು ಟ್ವಿಟ್ ಮಾಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ನವೆಂಬರ್ 30 ರೊಳಗೆ ಮೈಸೂರಿನ ರಿಂಗ್ ರಸ್ತೆ ಬೀದಿ ದೀಪ ಅಳವಡಿಸುವ ಯೋಜನೆಯನ್ನು ಪೂರ್ಣಗೊಳಿಸಿ, ಡಿಸೆಂಬರ್ ನಲ್ಲಿ ರಿಂಗ್ ರೋಡ್ ಎಲ್ಇಡಿ ದೀಪ ಬೆಳಗಿಸುವ ವಾಗ್ದಾನ ನೀಡಿದ್ದರು. ಅದರಂತೆ ನಿನ್ನೆಯಿಂದ ಮೈಸೂರು ಬೆಂಗಳೂರು ರಸ್ತೆಯ ಜಂಕ್ಷನ್ ದೀಪಗಳನ್ನ ಬೆಳಗಿಸಲಾಗಿತ್ತು. ಆದರೆ ಇದೀಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, MCB ಸ್ವಿಚ್ಸ್ ಕದ್ದು, ವಿದ್ಯುತ್ ಸಂಪರ್ಕ ತೆಗೆಯುತ್ತಿದ್ದಾರೆ.
Mysuru Road : MCB switch stolen for two days of lighting…