ತುಮಕೂರು: ಅವರು ಎಂದಿನಂತೆ ರಾತ್ರಿ ಮಲಗಿ ಬೆಳಿಗ್ಗೆ ಬೇಗ ಎದ್ದಿದ್ದರು. ಆನಂತರ ಬೆಡ್ ಶೀಟ್ ಮಡಚಲು ಮುಂದಾದಾಗ ಎದೆ ಝಲ್ ಎಂದಿದೆ. ಏಕೆಂದರೆ, ಸುಮಾರು 5 ಅಡಿ ಉದ್ದರ ನಾಗರಹಾವು ಬೆಡ್ ಮೇಲೆಯೇ ಮಲಗಿತ್ತು.
ತುಮಕೂರು ತಾಲೂಕಿನ ಕಂಬಾಳಪುರ ಗ್ರಾಮದ ಮುನಿಯಪ್ಪ ಎಂಬುವವರ ಮನೆಯಲ್ಲಿಯೇ ಈ ರೀತಿ ನಾಗಪ್ಪ ಹಾಯಾಗಿ ಮಲಗಿದ್ದ. ಬೆಳ್ಳಂಬೆಳಿಗ್ಗೆ ಕುಟುಂಬಸ್ಥರಿಗೆ ಬೆಡ್ ಮೇಲೆ ಸುಮಾರು ಐದು ಅಡಿ ಉದ್ದದ ನಾಗರಹಾವು (Cobra) ಪ್ರತ್ಯಕ್ಷವಾಗಿದೆ. ಬೆಡ್ ಶೀಟ್ ಮಡಚಿ ಇಡಲು ಮುಂದಾದ ಸಂದರ್ಭದಲ್ಲಿ ಕುಟುಂಬಸ್ಥರ ಗಮನಕ್ಕೆ ಈ ನಾಗರಹಾವು ಇರುವುದು ಕಂಡು ಬಂದಿದೆ.
ಕೂಡಲೇ ಕುಟುಂಬಸ್ಥರು ಉರಗ ತಜ್ಞ ದಿಲೀಪ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉರಗ ಸಂರಕ್ಷಕ ದಿಲೀಪ್ ಬೆಡ್ಶೀಟ್ ಒಳಗೆ ಬೆಚ್ಚನೆ ಮಲಗಿದ್ದ ನಾಗರಹಾವನ್ನು ಎತ್ತಿ ರಕ್ಷಿಸಿದ್ದಾರೆ.