Padubidre ಪಡುಬಿದ್ರೆ ಬೀಚ್ ನಲ್ಲಿ ನಮಾಜ್ : ಸಿಬ್ಬಂದಿ-ಪ್ರವಾಸಿಗರ ನಡುವೆ ಮಾತಿನ ಚಕಮಕಿ
ಉಡುಪಿ : ಬೀಚ್ ನಲ್ಲಿ ನಮಾಜ್ ಮಾಡುವ ವಿಚಾರವಾಗಿ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿರುವ ಬೀಚ್ ನಲ್ಲಿ ಪ್ರವಾಸಿಗರು ಮತ್ತು ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಪಡುಬಿದ್ರೆ ಬೀಚ್ ಬ್ಲೂ ಫ್ಲಾಗ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದ್ದು, ಬೀಚ್ ಆವರಣದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ಫಲಕವನ್ನೂ ಹಾಕಲಾಗಿದೆ.
ಆದರೆ ಭಾನುವಾರ ಸಂಜೆ ಬೀಚ್ ನೋಡಲು ಒಂದು ತಂಡ ಕಡಲತೀರದಲ್ಲಿ ನಮಾಜ್ ಮಾಡಲು ಮುಂದಾಗಿದೆ.
ಇದನ್ನ ಗಮನಿಸಿದ ಬ್ಲೂ ಫ್ಲಾಗ್ ಸಿಬ್ಬಂದಿ, ಈ ಬೀಚ್ ನಲ್ಲಿ ಯಾವುದೇ ಧರ್ಮದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದರ ಮಧ್ಯೆಯೂ ಯುವಕನೋರ್ವ ಬೀಚ್ ನಲ್ಲಿ ನಮಾಜ್ ಮಾಡಿದ್ದು, ಇದರಿಂದ ಸಿಬ್ಬಂದಿ ಮತ್ತು ಪ್ರವಾಸಿಗರ ನಡುವೆ ಮಾತಿನ ಚಕಮಕಿ ನಡೆದಿದೆ.