ವೀಕೆಂಡ್ ನಲ್ಲಿ ನಂದಗಿರಿ ಬೆಟ್ಟ ಓಪನ್ | ವೀಕೆಂಡ್ ಕರ್ಪ್ಯೂ ರದ್ಧು
ಚಿಕ್ಕಬಳ್ಳಾಪುರ: ನಂದಿಗಿರಿಧಾಮಕ್ಕೆ ಶನಿವಾರದಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ನಿಡಲಾಗಿದೆ.
ಕೊರೊನಾದ ಕಾರಣ ವಾರಾಂತ್ಯದಲ್ಲಿ ನಂದಗಿರಿಧಾಮಕ್ಕೆ ಪ್ರವಾಸಿಗರಿಗೆ ನಿರ್ಭಂದ ವಿಧಿಸಲಾಗಿತ್ತು. ಸಧ್ಯ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ವಿಶ್ವವಿಖ್ಯಾತ ನಂದಿಗಿರಿಧಾಮ ವಿಕೇಂಡ್ ಲಾಕ್ಡೌನ್ ತೆರವು ಮಾಡಲಾಗಿದೆ. ಶನಿವಾರದಿಂದ ಪ್ರವಾಸಿಗರಿಗೆ ನಂದಿಗಿರಿಧಾಮಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ನಂದಿಬೆಟ್ಟದ ಮೇಲ್ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಾಮರ್ಥ್ಯಕ್ಕೆ ಅನುಗುಣವಾಗಿ 1,000 ಬೈಕ್ ಹಾಗೂ 300 ಕಾರುಗಳಿಗಷ್ಟೇ ಅವಕಾಶ ಕೊಡಲಾಗುತ್ತಿದೆ.
ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿಯೇ ಟಿಕೆಟ್ ನೀಡಲಾಗುತ್ತಿದೆ. ಅಲ್ಲದೇ ನಂದಿಗಿರಿಧಾಮಕ್ಕೆ ಬರೋ ಪ್ರವಾಸಿಗರಿಗೆ ಆನ್ಲೈನ್ ಹಾಗೂ ಆಫ್ಲೈನ್ ಟಿಕೆಟ್ ವ್ಯವಸ್ಥೆ ಸಹ ಮಾಡಲಾಗಿದೆ.