ಪ್ರಧಾನಿ ಮೋದಿಯದ್ದು ನಾಟಕದ ಕಣ್ಣೀರು, ಜನ ಮೋಸ ಹೋಗ್ಬೇಡಿ : ಸಿದ್ದರಾಮಯ್ಯ
ಬೆಂಗಳೂರು : ಪ್ರಧಾನಿ ಮೋದಿ ಕಣ್ಣೀರ ನಾಟಕವಾಡುತ್ತಿದ್ದಾರೆ. ಇಂತಹ ನಾಟಕದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ಅಟ್ಟಹಾಸದ ಜೊತೆಗೆ ಈಗ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. ಪರಿಸ್ಥಿತಿ ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ.
ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ಪ್ರಧಾನಿ ಮೋದಿ ಕಣ್ಣೀರು ಹಾಕಿದಂತೆ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ಸೋಂಕಿಗೆ ಉತ್ಪಾದನೆಯಾದ ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿಕೊಟ್ಟರು. ದೇಶದ ಜನರು ಚಿಕಿತ್ಸೆ ಸಿಗದೇ ಲಸಿಕೆಯಿಲ್ಲದೇ ಸಾವನ್ನಪ್ಪುವ ಸ್ಥಿತಿಗೆ ತಂದರು.
ದೇಶದಲ್ಲಿ ವ್ಯಾಕ್ಸಿನ್ ಅಭಾವ ಎದುರಾಗಿದೆ. ಪ್ರಧಾನಿ ಮೋದಿ ಕಣ್ಣೀರ ನಾಟಕವಾಡುತ್ತಿದ್ದಾರೆ. ಇಂತಹ ನಾಟಕದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ.
ಕೊರೊನಾ ಹೋಗಲಾಡಿಸಲು ಚಪ್ಪಾಳೆ ತಟ್ಟಿ, ದೀಪ ಬೆಳಗಲು ಹೇಳಿದರು ಅದೆಲ್ಲವನ್ನು ಮಾಡಿದ್ದಾಯಿತು. ಚಪ್ಪಾಳೆ, ಜಾಗಟೆ, ದೀಪ, ತಟ್ಟೆ, ಕಣ್ಣೀರಿನಿಂದ ಕೊರೊನಾ ಓಡಿಸಲಾಗದು.
ಕಣ್ಣೀರ ನಾಟಕವಾಡಿ ಈಗ ಜನರನ್ನು ವಂಚಿಸಲು ಹೊರಟಿದ್ದಾರೆ. ಇದೆಕ್ಕೆಲ್ಲ ಜನ ಮೋಸ ಹೋಗಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡರು.