ರಾಷ್ಟ್ರೀಯ ಶಿಕ್ಷಣ ನೀತಿ : ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್

1 min read
BJP-Congress saaksha tv

ರಾಷ್ಟ್ರೀಯ ಶಿಕ್ಷಣ ನೀತಿ : ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್

ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ – ಬಿಜೆಪಿ ಟ್ವಿಟ್ಟರ್ ನಲ್ಲಿ ವಾಗ್ಯುದ್ಧ ನಡೆಸುತ್ತಿವೆ.

ಎನ್ ಇ ಪಿ- ನಾಗಪುರ ಎಜ್ಯುಕೇಶನ್ ಪಾಲಿಸಿಯನ್ನು ಸದನದಲ್ಲಿ ಚರ್ಚೆಸಲು ಹಿಂದೇಟು ಹಾಕಿದ ಬಿಜಪಿ ಸರ್ಕಾರ ಪಲಾಯನವಾದ ಅನುಸರಿಸಿದೆ.

ಇಂತಹ ಗಂಭೀರ ವಿಷಯಗಳಲ್ಲಿ ಸಾಕಷ್ಟು ಚರ್ಚೆ, ಮಂಥನ, ವಿಮರ್ಶೆಗಳ ನಂತರವೇ ತೀರ್ಮಾನ ಕೈಗೊಳ್ಳಬೇಕು.

BJP-Congress saaksha tv

ಆದರೆ ಜಾರಿಗೊಳಿಸುವ ತುರಾತುರಿಯಲ್ಲಿರುವ ಸರ್ಕಾರ ರಾಜ್ಯದ ಮಕ್ಕಳ ಭವಿಷ್ಯದ ವಿಚಾರದಲ್ಲಿ ಆಟವಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದಕ್ಕೆ ಟಾಂಗ್ ಕೊಟ್ಟಿರುವ ಬಿಜೆಪಿ, ಡಾ. ಕಸ್ತೂರಿ ರಂಗನ್ ಅವರಂತಹ ತಜ್ಞರ ನೇತೃತ್ವದಲ್ಲಿ 5 ವರ್ಷಗಳ ಕಾಲ ಮಂಥನ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ.

ಚರ್ಚೆ ಮಾಡುವುದಕ್ಕೆ ಬಿಜೆಪಿ ಸರ್ಕಾರ ಸಿದ್ಧವಿದೆ. ಆದರೆ ಶಿಕ್ಷಣದ ಹೆಸರಿನಲ್ಲಿ ಒಣ ರಾಜಕೀಯ ಬಿಡಲು ಕಾಂಗ್ರೆಸ್ ಪಕ್ಷ ಸಿದ್ಧವಿದೆಯೇ ಎಂದು ಸವಾಲ್ ಹಾಕಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd