ಕಾರ್ ಶೋರೂಮ್ ಗೆ ಬೆಂಕಿ, 40 ಬಿಎಂಡಬ್ಲ್ಯು ಕಾರುಗಳು ಸುಟ್ಟು ಭಸ್ಮ
ನವಿ ಮುಂಬೈನ ಟರ್ಭೆ ಎಂಐಡಿಸಿ ಪ್ರದೇಶದಲ್ಲಿನ ಕಾರ್ ಶೋರೂಮ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 40 ಬಿಎಂಡಬ್ಲ್ಯು ಕಾರುಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ,
ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಬಿಎಂಡಬ್ಲ್ಯು ಕಾರುಗಳ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ನಿಲ್ಲಿಸಿದ್ದ ಕಾರುಗಳು ಸುಟ್ಟು ಕರಕಲಾಗಿವೆ ಎಂದು ಎಂಐಡಿಸಿ ಅಗ್ನಿಶಾಮಕ ಸೇವೆಗಳ ಮುಖ್ಯ ಅಧಿಕಾರಿ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹತ್ತು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನ ಹತೋಟಿಗೆ ತರಲಾಗಿದೆ. ಬೆಂಕಿಯಲ್ಲಿ ಕನಿಷ್ಠ 40-45 ಬಿಎಂಡಬ್ಲ್ಯು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದರಾಮಯ್ಯಗೆ ಜೆಡಿಎಸ್ ಫೋಬಿಯಾ ಕಾಡುತ್ತಿದೆ : ಹೆಚ್.ಡಿ.ಕುಮಾರಸ್ವಾಮಿ
ಕಿವೀಸ್ ವಿರುದ್ಧ ಸರಣಿ | ಅಶ್ವಿನ್ ಗೆ ಲಾಭ.. ಜಡೇಜಾಗೆ ನಷ್ಟ
ರಾಜ್ಯದ 30 ಥಿಯೇಟರ್ ಗಳಲ್ಲಿ RRR ಟ್ರೈಲರ್ ರಿಲೀಸ್..! ಬೆಂಗಳೂರಿಗೆ ಬರುತ್ತಿದೆ ‘ಜಕ್ಕಣ್ಣ’ನ ಟೀಮ್..!