Neelakurinji-ನೀಲಕುರಿಂಜಿ ಹೂವಿನ ಬಗ್ಗೆ ನೀವು ಕೇಳಿದ್ದೀರಾ ಇದು 12 ವರ್ಷಗಳಿಗೊಮ್ಮೆ ಅರಳುವ ಹೂವು.ಇದು ದಕ್ಷಿಣ ಭಾರತದ ನೀಲಗಿರಿ ಬೆಟ್ಟದಲ್ಲಿರುವ ಸೋಲಾ ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ವೈಜ್ಞಾನಿಕ ಹೆಸರು ಸ್ಟ್ರೊಬಿಯಾಂತಸ್ ಕುಂತಿಯಾನ
“12 ವರ್ಷಗಳ ನಂತರ ಮುಳ್ಳಯ್ಯನಗಿರಿ ಶಿಖರದಲ್ಲಿ ಸಂಪೂರ್ಣವಾಗಿ ಅರಳುತ್ತಿರುವ ನೀಲಕುರಿಂಜಿ, ಚಿಕ್ಕಮಗಳೂರು ಪಶ್ಚಿಮ ಘಟ್ಟದಲ್ಲಿ, ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುವ ಪೊದೆಸಸ್ಯವಾಗಿದೆ.
“ನೀಲಕುರಿಂಜಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ12ವರ್ಷಗಳಿಗೆ ಒಮ್ಮೆಅರಳುತ್ತದೆ.
ಭಾರತದಲ್ಲಿ ಸುಮಾರು 46 ಬಗೆಯ ನೀಲಕುರಿಂಜಿ ಹೂವುಗಳನ್ನು ಗುರುತಿಸಲಾಗಿದೆ.
ಈ ಕುರುಂಜಿ ಹೂವು 250 ಜಾತಿಗಳಲ್ಲಿ ಕಂಡುಬರುತ್ತದೆ. ಅದರಲ್ಲಿ 46 ಜಾತಿಯ ಹೂವುಗಳು ನಮ್ಮ ಭಾರತದಲ್ಲಿ ಕಂಡುಬರುತ್ತದೆ
ಈ ಹೂವು 1300ರ ರಿಂದ 2400ಪರ್ವತಗಳಲ್ಲಿ ಕಂಡು ಬರುತ್ತದೆ.
NeelaKurinji in full bloom after 12 years in Mullayanagiri peak, Chikmagalur
Kurinji is a shrub found in the Western Ghats, Nilgiri Hills, which means the blue mountains, got their name from the purplish blue flowers of Neelakurinji pic.twitter.com/9tCA5NeM7X
— Dr Durgaprasad Hegde (@DpHegde) September 23, 2022
ಈ ಗಿಡ ಮೂವತ್ತರಿಂದ ಅರವತ್ತು ಸೆಂ.ಟಿ ಮೀಟರ್ ಉದ್ದ ಬೆಳೆಯುತ್ತದೆ. ಆದರೆ ಇದಕ್ಕೆ 180 ಸೆಂ.ಟಿ ಮೀಟರ್ ತನಕ ಬೆಳೆಯುವ ಕ್ಷಮತೆ ಇದೆ. ಈ ಹೂವಿನ ಸೌಂದರ್ಯ ವನ್ನು ಸವಿಯಲು ಪ್ರಪಂಚದ ನಾನಾ ಭಾಗಗಳಿಂದ ಬರುತ್ತಾರೆ. ಹಾಗಾಗಿ ನೀಲಗಿರಿ ಬೆಟ್ಟವು ಒಂದು ಪ್ರವಾಸಿ ತಾಣವಾಗಿದೆ.
ಈ ಹೂವು ಅತೀ ಹೆಚ್ಚಾಗಿ ಪೂರ್ವ ಘಟ್ಟ ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಸಂದುರ್ ಬೆಟ್ಟದಲ್ಲಿ ಕಂಡುಬರುತ್ತದೆ. ಈ ಹೂವು ಕೊನೇಯದಾಗಿ ಕೇರಳ ಹಾಗೂ ತಮಿಳು ನಾಡಿನಲ್ಲಿ ಅರಳಿತ್ತು. ಕುರಿಂಜಿಮಾಲ ಅಭಯಾರಣ್ಯದಲ್ಲಿ ಕುರಿಂಜಿ ಹೂವಿನ ಮರಗಳು ಸರಾಸರಿ 32ಕಿಲೋ ಮೀಟರ್ ಸ್ಥಳವನ್ನು ಆವರಿಸಿಕೊಂಡಿದೆ. ಕುರಿಂಜಿಮಾಲ ಅಭಯಾರಣ್ಯವು ಕೇರಳದ ಹಿಡುಕ್ಕಿ ಜಿಲ್ಲೆಯ ಕೊತ್ತಕಂಬುರ್ ಮತ್ತು ವತವಾಡ ಹಳ್ಳಿಯಲ್ಲಿದೆ
ಕೊನೆಯದಾಗಿ ಮೂನಾರ್ನಲ್ಲಿ ಕೋವಿಲೂರ್, ಕಡವರಿ, ರಾಜಮಲ ಮತ್ತು ಎರಾವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಅದ್ಭುತ ದೃಶ್ಯ ಕಂಡುಬಂದಿತ್ತು. ಆಗಸ್ಟ್ನಿಂದ ಅಕ್ಟೋಬರ್ ವರೆಗೆ ಇದರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.
Neelakurinji flower blooms once in 12 years