Neiphiu Rio : ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ 5ನೇ ಭಾರಿ ಅಧಿಕಾರಕ್ಕೇರಿದ ನೇಫಿಯು ರಿಯೊ…
ನಾಗಾಲ್ಯಾಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಮುಖ್ಯಸ್ಥ ನೇಫಿಯು ರಿಯೊ ಅಧಿಕಾರ ಸ್ವೀಕರಿಸಿದ್ದಾರೆ. ಮಂಗಳವಾರ ಕೊಹಿಮಾದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನೀಫಿಯು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾಗವಹಿಸಿದ್ದರು. ರಿಯೊ ಮುಖ್ಯಮಂತ್ರಿಯಾಗಿ ನೆಫಿಯು ಸತತ ಐದನೇ ಬಾರಿಗೆ ಆಯ್ಕೆಯಾಗಿದ್ದಾರೆ.
60 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ನಾಗಾಲ್ಯಾಂಡ್ನಲ್ಲಿ ಎನ್ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ ಒಟ್ಟಾಗಿ ಕೆಲಸ ಮಾಡಿವೆ. ಈ ಮೈತ್ರಿಕೂಟ ಒಟ್ಟು 37 ಸ್ಥಾನಗಳನ್ನು ಪಡೆದುಕೊಂಡಿದೆ. ಇತರ ಪಕ್ಷಗಳು ಸಹ ನೆಫಿಯು ಮತ್ತು ಅವರ ಸರ್ಕಾರವನ್ನು ಬೆಂಬಲಿಸಿದವು.
ನಾಗಾಲ್ಯಾಂಡ್ನಲ್ಲಿ ಮಹಿಳೆಯೊಬ್ಬರು ಶಾಸಕಿಯಾಗಿ ಆಯ್ಕೆಯಾಗಿರುವುದು ಇದೇ ಮೊದಲು. ಇದುವರೆಗೆ 13 ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದರೂ ಒಬ್ಬ ಮಹಿಳೆಯೂ ವಿಧಾನಸಭೆ ಪ್ರವೇಶಿಸಿಲ್ಲ. ಈ ಬಾರಿ ಹೆಖಾನಿ ಜಕಾಲು ಎಂಬ ಮಹಿಳೆ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ.
Neiphiu Rio: Neiphiu Rio became the 5th Chief Minister of Nagaland…