ನೇಪಾಳ : ನದಿಗೆ ಉರುಳಿ ಬಿದ್ದ ಬಸ್ – 32ಕ್ಕೂ ಹೆಚ್ಚು ಮಂದಿ ಸಾವು
ನೇಪಾಳ : ಬಸ್ ಒಂದು ನದಿಗೆ ಉರುಳಿ ಬಿದ್ದಿದ್ದು, ದುರ್ಘಟನೆಯಲ್ಲಿ 32 ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿರುವ ಘಟನೆ ನೇಪಾಳದ ಮುಗು ಜಿಲ್ಲೆಯ ಗಮಗಾಡಿ ಬಳಿ ನಡೆದಿದೆ. ಗಮಗಾಡಿಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ರಸ್ತೆಯಿಂದ 300 ಮೀಟರ್ ಮೇಲಿಂದ ನದಿಗೆ ಬಿದ್ದಿದೆ. ಘಟನೆಯಲ್ಲಿ 32 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ರೆ ಅನೇಕರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ಪ್ರಯಾಣಿಕರ ಬಸ್ ನೇಪಾಳಗುಂಜ್ನಿಂದ ಗಮಗಧಿಯತ್ತ ಹೊರಟಿತ್ತು. ಈ ವೇಳೆ ಚಯನಾಥ ರಾರ ಪುರ ಬಳಿ ನದಿಗೆ ಬಿದ್ದಿದೆ. ಬಸ್ಸಿನಲ್ಲಿದ್ದ ಅನೇಕ ಪ್ರಯಾಣಿಕರು ವಿಜಯದಶಮಿ ಹಬ್ಬವನ್ನು ಆಚರಿಸಲು ದೇಶದ ವಿವಿಧ ಭಾಗಗಳಿಂದ ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕಾಗಿ ನೇಪಾಳ ಸೇನೆಯ ಚಾಪರ್ ಅನ್ನು ಸುರಖೇಟಿನಿಂದ ಕಳುಹಿಸಲಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ 10 ಜನರನ್ನ ಕೊಹಲ್ಪುರ್ ವೈದ್ಯಕೀಯ ಕಾಲೇಜಿಗೆ ಮತ್ತು ಐವರನ್ನು ನೇಪಾಳಗುಂಜ್ನ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ನೇಪಾಳಗುಂಜ್ ಏರ್ಪೋರ್ಟ್ ಸೆಕ್ಯುರಿಟಿ ಗಾರ್ಡ್ನ ಉಸ್ತುವಾರಿ ಸಂತೋಷ್ ಷಾ ಹೇಳಿದ್ದಾರೆ. ಮುಗು ಸುಂದರ ರಾರ ಸರೋವರಕ್ಕೆ ಪ್ರಸಿದ್ಧವಾಗಿದೆ, ಇದು ಕಠ್ಮಂಡುವಿನಿಂದ 650 ಕಿಮೀ ವಾಯುವ್ಯದಲ್ಲಿದೆ.