Nepal Plane Crash : ವಿಮಾನ ಅಪಘಾತದ ದೃಶ್ಯ ಸೆರೆಯಾಯ್ತು ಫೇಸ್ ಬುಕ್ ಲೈವ್ ನಲ್ಲಿ ….
ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ರನ್ ವೇ ಮೇಲೆ ಪತನಗೊಂಡು 68 ಮಂದಿ ಸಾವನ್ನಪ್ಪಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಯಾಣಿಕರು ಅಪಘಾತ ಸಮಯಕ್ಕೂ ಮುನ್ನ ಕೆಲವೇ ಸೆಂಕೆಂಡಗಳ ಮೊದಲು ನಗುನಗುತ್ತಾ ಫೇಸ್ ಬುಕ್ ಲೈವ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸೋನು ಜೈಶ್ವಾಲ್ ಎಂಬ ವ್ಯಕ್ತಿಯ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ವಿಮಾನ ನೆಲಕ್ಕೆ ಬಡಿದು ಬೆಂಕಿ ಹೊತ್ತಿಕೊಳ್ಳುವ ವಿಡಿಯೋ ನೋಡಬಹುದು.
ಸೋನು ಜೈಸ್ವಾಲ್ (29) ಉತ್ತರ ಪ್ರದೇಶದ ಗಾಜಿಪುರದ ಮದ್ಯ ವ್ಯಾಪಾರಿ. ಜೈಸ್ವಾಲ್ ಜನವರಿ 13 ರಂದು ಅನಿಲ್ ರಾಜ್ ಭರ್ (28), ವಿಶಾಲ್ ಶರ್ಮಾ (23) ಮತ್ತು ಅಭಿಷೇಕ್ ಸಿಂಗ್ (23) ಅವರೊಂದಿಗೆ ಕಠ್ಮಂಡುವಿಗೆ ತೆರಳಿದ್ದರು. ಈ ನಾಲ್ವರು ಅಲ್ಲಿನ ಪಶುಪತಿನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಅವರು ಪ್ಯಾರಾಗ್ಲೈಡಿಂಗ್‌ಗಾಗಿ ಪೋಖರಾಗೆ ತೆರಳಿದರು.
🚨Trigger Warning.
The guy who’s shooting this is from Ghazipur India. Moments before the crash. pic.twitter.com/hgMJ187ele
— Gabbar (@GabbbarSingh) January 15, 2023
ಎಥಿ ಏರ್‌ಲೈನ್ಸ್‌ಗೆ ಸೇರಿದ ATR-72 ವಿಮಾನವು ಭಾನುವಾರ, ಜನವರಿ 15 ರಂದು ಅಪಘಾತಕ್ಕೀಡಾಯಿತು. ಬೆಂಕಿಯಲ್ಲಿ 68 ಜನರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಹೆಚ್ಚಿನವರು ನೇಪಾಳದವರು ಎಂಬುದು ಗಮನಾರ್ಹ. ಸತ್ತವರಲ್ಲಿ ರಷ್ಯಾ, ಕೊರಿಯಾ, ಐರ್ಲೆಂಡ್ ಮತ್ತು ಫ್ರಾನ್ಸ್ ನಾಗರಿಕರು ಇದ್ದಾರೆ. ಎರಡು ಇಂಜಿನ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ರನ್‌ವೇ ಮೇಲೆ ಪತನಗೊಂಡಿದೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು.
Nepal Plane Crash: The scene of the plane crash was captured on Facebook Live.