Nepal | ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಕೆಟ್ಟ ದಾಖಲೆ.. 8 ರನ್ ಗಳಿಗೆ ಆಲೌಟ್..!!
ಅಂಡರ್-19 ನೇಪಾಳದ ಮಹಿಳಾ ತಂಡವು ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆಯನ್ನು ನಮೂದಿಸಿದೆ.
ಶನಿವಾರ ನಡೆದ ಅಂಡರ್-19 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನೇಪಾಳ ಮಹಿಳಾ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಎದುರಿಸಿತ್ತು.
ಈ ಪಂದ್ಯದಲ್ಲಿ ನೇಪಾಳ ತಂಡ ಕೇವಲ ಎಂಟು ರನ್ಗಳಿಗೆ ಆಲೌಟ್ ಆಗಿತ್ತು.
ಈ ಮೂಲಕ ನೇಪಾಳ ತಂಡ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್ ಮಾಡಿದ ತಂಡವಾಗಿದೆ.
ನೇಪಾಳ ಇನ್ನಿಂಗ್ಸ್ ನಲ್ಲಿ ಆರು ಮಂದಿ ಬ್ಯಾಟ್ಸ್ ಮನ್ ಗಳು ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.
ನೇಪಾಳ ಪರ ಸ್ನೇಹಾ ಮಹಾರಾ 3 ರನ್ ಗಳಿಸಿದರು. 9 ರನ್ಗಳ ಗುರಿ ಬೆನ್ನತ್ತಿದ ಯುಎಇ 1.1 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು.
ಜೂನ್ 3 ರಂದು (ಶುಕ್ರವಾರ) ನಡೆದ ತನ್ನ ಹಿಂದಿನ ಪಂದ್ಯದಲ್ಲಿ ನೇಪಾಳ ಕತಾರ್ ತಂಡವನ್ನು 79 ರನ್ಗಳಿಂದ ಸೋಲಿಸಿತು.