ಬಾಲಿವುಡ್ ನ ಈ ಸೆಲೆಬ್ರಿಟಿಗಳನ್ನ ಬಾಯ್ಕಟ್ ಮಾಡುವಂತೆ ನೆಟ್ಟಿಗರಿಂದ ಅಭಿಯಾನ..!
ಒಂದೆಡೆ ಕೊರೊನಾ ರಣಕೇಕೆ… ಎಲ್ಲಿ ನೋಡಿದ್ರು ಸಾವು ನೋವು.. ಬೆಟ್ ಕೊರೆತೆ, ಆಕ್ಸಿಜನ್ ಕೊರತೆ.. ಬಡ ಬಗ್ಗರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಪ್ರಸ್ತುತ ಭಾರತದಲ್ಲಿದೆ. ಆದ್ರೆ ಕೆಲ ಸೋ ಕಾಲ್ಡ್ ಬಾಲಿವುಡ್ ನ ಸೆಲೆಬ್ರಿಟಿಗಳಿಗೆ ಇದ್ಯಾವುದರ ಚಿಂತೆಯೇ ಇಲ್ಲ..
ಕೊರೊನಾ ಸಂಕಷ್ಟ ಎದುರಾಗ್ತಿದ್ದಂತೆ ದೇಶ ಬಿಟ್ಟು ವಿದೇಶಗಳಿಗೆ ಪರಾರಿಯಾಗಿದ್ದಾರೆ. ಇದು ಸಹಜವಾಗಿಯೇ ನೆಟ್ಟಿಗರನ್ನ ಕೆರಳಿಸಿದೆ. ಅಂತಹ ಸೆಲೆಬ್ರಿಟಿಗಳನ್ನ ಟ್ರೋಲ್ ಮೇಲೆ ಟ್ರೋಲ್ ಮಾಡಿ ಟೀಕಿಸುತ್ತಿದ್ದಾರೆ. ಜೊತೆಗೆ ಈ ತಾರೆಯರ ಸಿನಿಮಾಗಳನ್ನ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದಾರೆ.
ವಿದೇಶ ಅದ್ರಲ್ಲೂ ಮಾಲ್ಡೀವ್ಸ್ ಗೆ ಹೋಗಿರುವ ಅನೇಕ ತಾರೆಯರು ವಿಶೇಷವಾಗಿ ಈ ಲಿಸ್ಟ್ ನಲ್ಲಿ ಜಾನ್ಹವಿ ಕಪೂರ್ , ಸಾರಾ ಅಲಿ ಖಾನ್ , ರಣಬೀರ್ ಕಪೂರ್ ಆಲಿಯಾ ಭಟ್ ಕೂಡ ಸೇರಿದ್ದಾರೆ. ಈ ಸೆಲೆಬ್ರಿಟಿಗಳು ವಿದೇಶದಲ್ಲಿ ಹಣವನ್ನ ನೀರಿನಂತೆ ಪೋಲು ಮಾಡುತ್ತಾ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಲದಕ್ಕೆ ಫೋಟೋಗಳಿಗೂ ಫೋಸ್ ಕೊಟ್ಟು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿರುವುದು ನೆಟ್ಟಿಗರ ಆಕ್ರೋಶದ ಬೆಂಕಿಗೆ ತುಪ್ಪು ಸುರಿಯುವಂತಿದೆ. ಇಂತಹ ಸಮಯದಲ್ಲಿ ಭಾರತ ಬಿಟ್ಟು ಓಡಿಹೋಗಿ ಭಾರತೀಯರನ್ನ ನಿರ್ಲಕ್ಷ್ಯ ಮಾಡಿರುವ ಇಂತಹ ಸ್ಟಾರ್ ಗಳ ಸಿನಿಮಾಗಳನ್ನ ನೋಡಲೇಬಾರದು ಎಂದು ನೆಟ್ಟಿಗರು ಕರೆ ಕೊಟ್ಟಿದ್ದಾರೆ.
ಈ ನಡುವೆ, ಬಾಲಿವುಡ್ ಸ್ಟಾರ್ ಗಳು ಮಾಲ್ಡೀವ್ಸ್ ನಲ್ಲಿ ಮುಖಭಂಗ ಅನುಭವಿಸಿದ್ದಾರೆ. ಭಾರತದ ಪ್ರವಾಸಿಗರು ಮಾಲ್ಡೀವ್ಸ್ ದ್ವೀಪಗಳಲ್ಲಿ ಉಳಿದುಕೊಳ್ಳುವಂತಿಲ್ಲ ಎಂದು ಮಾಲ್ಡೀವ್ಸ್ ಭಾರತದ ಸೆಲೆಬ್ರಿಟಿಗಳಿಗೆ ನಿರ್ಬಂಧ ಹೇರಿದೆ. ಹೀಗಾಗಿ ಮಾಲ್ಡೀವ್ಸ್ ನಲ್ಲಿ ಮಜಾ ಮಾಡ್ತಿರುವ ಸಿತಾರೆಯರು ಭಾರತಕ್ಕೆ ಮರಳಿ ಪಾದಾರ್ಪಣೆ ಮಾಡ್ತಿದ್ದಾರೆ.