ಟೆಲಿಗ್ರಾಮ್ ನಿಂದ ಹೊಸ ಫೀಚರ್ ಅಪ್ ಡೇಟ್ : ಏನಿದರ ವಿಷೇಶತೆಗಳು..!
ಪ್ರಸಿದ್ಧ ಸಾಮಾಜಿಕ ಜಾಲತಾಣ ಮಾಧ್ಯಮವಾಗಿರುವ ಇನ್ಸ್ ಸ್ಟೆಂಟ್ ಮೆಸೇಜಿಂಗ್ ಆಪ್ ಟೆಲಿಗ್ರಾಮ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ ಒಂದನ್ನ ಅಪ್ ಡೇಟ್ ಮಾಡಲು ಹೊರಟಿದೆ. ಇದೊಂದು ಆಟೋ ಡಿಲೀಟ್ ಫೀಚರ್ ಆಗಿದ್ದು, ಬಳಕೆದಾರರ ಎಲ್ಲಾ ಮೆಸೇಜ್ ಗಳು ಆಟೋ ಡಿಲೀಟ್ ಆಗುವ ಆಪ್ಶನ್ ಹೊಂದಿದೆ. ತನ್ನ ಅಧಿಕೃತ ಖಾತೆ ಮುಖಾಂತರ ಟೆಲಿಗ್ರಾಮ ಅಪ್ ಡೇಟ್ ಫೀಚರ್ ಬಗ್ಗೆ ಮಾಹಿತಿ ತಿಳಿಸಿದೆ.
ವರ್ಷದ 3ನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡ ಬಾರತದ GDP
ಇತ್ತೀಚೆಗೆ ವಾಟ್ಸಾಪ್ ತನ್ನ ಪ್ರೈವೆಸಿ ನೀತಿಯನ್ನ ಘೋಷಣೆ ಮಾಡಿದ ಬಳಿಕ ಲಕ್ಷಾಂತರ ಜನರು ವಾಟ್ಸಾಪ್ ಗೆ ವಿದಾಯ ಹೇಳಿ ಟೆಲಿಗ್ರಾಮ್ ನತ್ತ ಮುಖ ಮಾಡಿದ್ದಾರೆ. ಹೀಗಾಗಿ ಬಳಕೆದಾರರ ಅನುಕೂಲಕ್ಕಾಗಿ ಟೆಲಿಗ್ರಾಮ್ ಹೊಸ ಹೊಸ ಅಪ್ ಡೇಟ್ ಗಳನ್ನ ನೀಡಲು ಮುಂದಾಗುತ್ತಿದೆ. ಅಂದ್ಹಾಗೆ ಟೆಲಿಗ್ರಾಮ್ ನ ಖಾಸಗಿ ಚಾಟ್ ಗಳ ಆಟೋ ಡಿಲೀಟಿಂಗ್ ಆಯ್ಕೆ ಮುಂಚಿನಿಂದಲೇ ಟೆಲಿಗ್ರಾಂನಲ್ಲಿ ಇದೆ. ಆದ್ರೆ ಇದನ್ನ ಇನ್ನಷ್ಟು ಉತ್ತಮಗೊಳಿಸುವ ಜೊತೆಗೆ ಬಳಕೆದಾರರ ಸುರಕ್ಷತೆ ಗೌಪ್ಯತೆ ಕಾಪಾಡುವ ಮತ್ತಷ್ಟು ಉತ್ತಮ ಫೀಚರ್ ಗಳನ್ನ ಅಪ್ ಡೇಟ್ ಮಾಡಲು ಟೆಲಿಗ್ರಾಮ್ ಮುಂದಾಗಿದೆ. ಇನ್ನೂ ಈ ಹೊಸ ಫೀಚರ್ ನ ಮೂಲಕ 24 ಗಂಟೆಗಳ ಒಳಗಿನ ಮೆಸೇಜ್ ಗಳ ಡಿಲೀಟ್ ಗೂ ಟೈಮ್ ಸೆಟ್ ಮಾಡಿಡುವ ಆಪ್ಶನ್ ಸಹ ಸಿಗಲಿದೆ.
ಇದ್ಯಾವ ನ್ಯಾಯ ಸ್ವಾಮಿ… ಒಬ್ಬ ಮಗಳ ಜೀವ ಉಳಿಸಲು ಮತ್ತೊಬ್ಬಳನ್ನ ಮಾರಿದ ಪೋಷಕರು..!
ನೈಜೀರಿಯಾದಲ್ಲಿ ವಸತಿಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಕಿಡ್ನಾಪ್ ..!