ವ್ಯಾಕ್ಸಿನೇಷನ್ ಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಪರಿಷ್ಕೃತ ಮಾರ್ಗಸೂಚಿ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಜೂನ್ 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದ್ದು, ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮವು ಜೂನ್ 21 ರಿಂದ ಜಾರಿಗೆ ಬರಲಿದೆ.
ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ ಕೇಂದ್ರ ಸರ್ಕಾರವು ಲಸಿಕೆ ತಯಾರಿಕೆಯಲ್ಲಿ 75 ಪ್ರತಿಶತದಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯಗಳಿಗೆ ನೀಡುತ್ತದೆ. ಕೇಂದ್ರದಿಂದ ಪಡೆದ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು, 45 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ವ್ಯಾಕ್ಸಿನೇಷನ್ನಲ್ಲಿ ಯಾವ ಗುಂಪಿಗೆ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ರಾಜ್ಯಗಳಿಗೆ ಎಷ್ಟು ಲಸಿಕೆ ಪ್ರಮಾಣವನ್ನು ನೀಡಲಾಗುವುದು ಎಂಬುದನ್ನು ರಾಜ್ಯದ ಜನಸಂಖ್ಯೆ, ಕೊರೋನಾ ಪ್ರಕರಣಗಳು ಮತ್ತು ಲಸಿಕೆ ವ್ಯರ್ಥವಾಗುವುದನ್ನು ಅವಲಂಬಿಸಿರುತ್ತದೆ.
ಮಾರ್ಗಸೂಚಿಯ ಪ್ರಕಾರ, ಖಾಸಗಿ ಆಸ್ಪತ್ರೆಗಳು ಲಸಿಕೆಯ ಒಂದು ಡೋಸ್ ಗೆ ಲಸಿಕೆ ಶುಲ್ಕ 150 ರೂ ಸರ್ವೀಸ್ ಚಾರ್ಜ್ ಮಾತ್ರ ಪಾವತಿಸಿ ಲಸಿಕೆ ಪಡೆಯಬಹುದು.
ಸರ್ಕಾರಿ ಮತ್ತು ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳು ಜನರ ಅನುಕೂಲಕ್ಕಾಗಿ ಆನ್ಸೈಟ್ ನೋಂದಣಿ ನೀಡಲು ಸಹ ಸಾಧ್ಯವಾಗುತ್ತದೆ. ಆದರೆ ವಿವರವಾದ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ಈ ಹೊಸ ಮಾರ್ಗಸೂಚಿಗಳು ಜೂನ್ 21 ರಿಂದ ಅನ್ವಯವಾಗುತ್ತವೆ ಮತ್ತು ಸರ್ಕಾರವು ಅದನ್ನು ಕಾಲಕಾಲಕ್ಕೆ ಪರಿಶೀಲಿಸುತ್ತದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಗಳು#Saakshatv #healthtips #homeremedies #improveimmunity https://t.co/Wl5YTeOQAB
— Saaksha TV (@SaakshaTv) June 5, 2021
ಎಗ್ ಕಬಾಬ್ https://t.co/ew7PxrTVda
— Saaksha TV (@SaakshaTv) June 6, 2021
ಮೊಸರಿಗೆ ಏನನ್ನು ಬೆರೆಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು? – ಇಲ್ಲಿದೆ ಡಯೆಟಿಷಿಯನ್ ಸಲಹೆ#Saakshatv #healthtips #immunity https://t.co/rUUIj2atbJ
— Saaksha TV (@SaakshaTv) June 6, 2021
ರಂಬೂಟನ್ ಹಣ್ಣಿನ ಕೃಷಿ ಅಡಿಕೆ, ರಬ್ಬರ್ ಗಿಂತ ಹೆಚ್ಚು ಲಾಭದಾಯಕ#Rambutanfruit https://t.co/KM23CLP2TS
— Saaksha TV (@SaakshaTv) June 6, 2021
#Newguidelines #vaccination