ADVERTISEMENT
Tuesday, September 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ದೇಶದಲ್ಲಿ ಇಂದಿನಿಂದ ಹೊಸ ಕಾನೂನು ಜಾರಿ

ಹೊಸ ಯುಗ ಆರಂಭ

Author2 by Author2
July 1, 2024
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಯುಗಾರಂಭವಾಗಿದೆ. ಇಂದಿನಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿಯಾಗಿವೆ. ಹೊಸ ಕ್ರಿಮಿನಲ್‌ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್‌) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ) 2024ನೇ ಜುಲೈ 1ರಂದು ದೇಶಾದ್ಯಂತ ಜಾರಿಯಾಗಿದೆ.

ಈ ಮೂರು ಕಾನೂನುಗಳು ಇನ್ನು ಮುಂದೆ ಇಂಡಿಯನ್‌ ಪೀನಲ್‌ ಕೋಡ್‌ (ಐಪಿಸಿ), ಕೋಡ್‌ ಆಫ್‌ ಕ್ರಿಮಿನಲ್‌ ಪ್ರೊಸಿಜರ್‌ (ಸಿಆರ್‌ಪಿಸಿ) ಮತ್ತು ಎವಿಡೆನ್ಸ್‌ ಆಕ್ಟ್ ಗಳ ಸ್ಥಾನ ತುಂಬಲಿವೆ. ಜಾಗವನ್ನು ತುಂಬಲಿವೆ. ದೇಶದ ಯಾವುದೇ ಮೂಲೆಯಲ್ಲೂ ದೂರು ನೀಡುವ ಕ್ರಮವಾದ ಝೀರೋ ಎಫ್‌ಐಆರ್‌, ಆನ್‌ಲೈನ್‌ ಮಾಧ್ಯಮದ ಮೂಲಕವೂ ಪೊಲೀಸರಿಗೆ ದೂರು ನೀಡುವ ಸೌಲಭ್ಯ, ಎಸ್‌ಎಂಎಸ್‌ ನಂಥ ಡಿಜಿಟಲ್‌ ಮಾಧ್ಯಮದ ಮೂಲಕವೂ ಸಮನ್ಸ್‌ ನೀಡುವ ವ್ಯವಸ್ಥೆ ಸೇರಿದಂತೆ ಈ ಮೂರು ಕಾನೂನುಗಳು ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿವೆ. ಇದರಿಂದಾಗಿ ಸಾಮಾನ್ಯರು ಕೂಡ ಯಾವುದೇ ಒತ್ತಡ, ತೊಂದರೆ ಇಲ್ಲದೆ ದೂರು ದಾಖಲಿಸಿ, ನ್ಯಾಯ ಪಡೆಯಬಹುದು. ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಾಡುವ ಕ್ರಿಮಿನಲ್ ಗಳಿಗೂ ಸಂಕಷ್ಟ ಬಂದೋದಗುವಂತಾಗಿದೆ. ಫೋನಿಗೆ ಸಮನ್ಸ್ ಬಂತೆಂದರೆ ಓಡೋಡಿ ಕೋರ್ಟ್ ಗೆ ಬಂದು ಶರಣಾಗಬೇಕು. ಇಲ್ಲವಾದರೆ, ಅಪಾಯ ಕಟ್ಟಿಟ್ಟ ಬುತ್ತಿ.

Related posts

ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

September 7, 2026
ಪಾಕಿಸ್ತಾನದ ನೆಲಕ್ಕೆ ನುಗ್ಗಿ ಹೊಡೆಯುವ ಶಕ್ತಿ ಭಾರತಕ್ಕಿದೆ: ದೆಹಲಿಯಲ್ಲಿ ಮೋದಿ ಗುಡುಗು

ಪಾಕಿಸ್ತಾನದ ನೆಲಕ್ಕೆ ನುಗ್ಗಿ ಹೊಡೆಯುವ ಶಕ್ತಿ ಭಾರತಕ್ಕಿದೆ: ದೆಹಲಿಯಲ್ಲಿ ಮೋದಿ ಗುಡುಗು

September 7, 2026

ಹೊಸ ಕಾನೂನುಗಳು ಜಾರಿಗೆ ಬಂದರೆ ಪ್ರತಿಯೊಬ್ಬರಿಗೂ ತ್ವರಿತವಾಗಿ ನ್ಯಾಯ ಸಿಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದೇಶದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಹೊಸ ಕಾನೂನುಗಳನ್ನು ಸ್ವಾಗತಿಸಿದ್ದಾರೆ. ಇನ್ನೊಂದೆಡೆ ವಿಪಕ್ಷಗಳು ಇದನ್ನು ವಿರೋಧಿಸಿವೆ.
ಹಳೆಯ ಕಾನೂನುಗಳು ಬ್ರಿಟಿಷ್‌ ಸಾಮ್ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದವು. ಈಗ ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಪ್ರಮುಖ ಕಾನೂನುಗಳ ಉದ್ದೇಶ ಶಿಕ್ಷೆ ನೀಡುವುದಲ್ಲ, ಬದಲಿಗೆ ನ್ಯಾಯ ಒದಗಿಸುವುದಾಗಿದೆ. ಮೊದಲ ಬಾರಿಗೆ, ಭಾರತೀಯತೆಯ ಅಸ್ಮಿತೆಯೊಂದಿಗೆ ಮೂರು ಪ್ರಮುಖ ಕ್ರಿಮಿನಲ್‌ ಕಾನೂನುಗಳ ಮೂಲಕ, ನಮ್ಮದೇ ಆದ ಅಪರಾಧ ನ್ಯಾಯ ವ್ಯವಸ್ಥೆಯು ದೇಶದಿಂದ, ದೇಶಕ್ಕಾಗಿ ಮತ್ತು ಭಾರತೀಯ ಸಂಸತ್ತಿನಿಂದ ರಚಿಸಲ್ಪಟ್ಟ ವ್ಯವಸ್ಥೆಯಿಂದ ನಡೆಸಲ್ಪಡುತ್ತದೆ.

ಜಾರಿಯಾಗಿರುವ ಹೊಸ ಭಾರತೀಯ ದಂಡ ಸಂಹಿತೆ ಬದಲಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತಾ ಕಾಯಿದೆಯು ಹಿಂದಿನ 511 ಸೆಕ್ಷನ್‌ಗಳ ಬದಲಿಗೆ 358 ಸೆಕ್ಷನ್‌ ಗಳನ್ನು ಹೊಂದಿವೆ. ಇಲ್ಲಿ ಬರೋಬ್ಬರಿ 175 ಸೆಕ್ಷನ್‌ಗಳನ್ನು ಬದಲಿಸಿ, 8 ಹೊಸ ಸೆಕ್ಷನ್‌ಗಳನ್ನು ಸೇರಿಸಿ, 22 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಈಗ 513 ಸೆಕ್ಷನ್‌ಗಳನ್ನು ಹೊಂದಿದೆ. ಹಳೆಯ ಕಾನೂನಿನ 160 ಸೆಕ್ಷನ್‌ಗಳನ್ನು ಬದಲಾಯಿಸಲಾಗಿದೆ. ಅದರಲ್ಲಿ 9 ಹೊಸ ಸೆಕ್ಷನ್‌ ಸೇರಿಸಿ, 9 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಸಾಕ್ಷಿ ಸಂಹಿತೆ ಹಿಂದಿನ 167ರ ಬದಲಿಗೆ 170 ವಿಭಾಗಗಳನ್ನು ಹೊಂದಿರುತ್ತದೆ. 23 ವಿಭಾಗಗಳನ್ನು ಬದಲಾಯಿಸಲಾಗಿದೆ. ಒಂದು ಹೊಸ ವಿಭಾಗ ಸೇರಿಸಲಾಗಿದೆ ಮತ್ತು 5 ವಿಭಾಗಗಳನ್ನು ರದ್ದುಗೊಳಿಸಲಾಗಿದೆ.

ಈ ಹೊಸ ಕಾನೂನುಗಳ ಅನುಷ್ಠಾನದ ನಂತರ ಎಫ್‌ಐಆರ್‌ನಿಂದ ನ್ಯಾಯಾಲಯದ ತೀರ್ಪಿನವರೆಗೆ, ಸಂಪೂರ್ಣ ಪ್ರಕ್ರಿಯೆ ಆನ್ ಲೈನ್ ನಲ್ಲಿರುತ್ತದೆ. ಭಾರತವು ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವ ದೇಶವಾಗಲಿದೆ. ಈ ಕಾನೂನುಗಳು ತಾರೀಖ್‌-ಪೆ-ತಾರೀಖ್‌ ಅಂದರೆ, ಪದೇಪದೆ ವಿಚಾರಣೆ ಮುಂದೂಡುವುದು ಪ್ರವೃತ್ತಿಗೆ ಅಂತ್ಯ ಹಾಡುವ ಜತೆಗೆ ಮೂರು ವರ್ಷಗಳಲ್ಲಿ ನ್ಯಾಯವನ್ನು ನೀಡುವ ನ್ಯಾಯಾಂಗ ವ್ಯವಸ್ಥೆಯ ಭರವಸೆ ನೀಡಿವೆ. ಏಕೆಂದರೆ, ಹಿಂದೆ ಯಾವುದೇ ಚಿಕ್ಕ ಕೇಸ್ ಆಗಲಿ, ಅದನ್ನು ಯಾವುದಾದರೂ ಕಾರಣಕ್ಕೆ ಹಿಗ್ಗಿಸಿ ಹತ್ತಾರು ವರ್ಷಗಳ ವರೆಗೆ ನಡೆಸಿದ್ದ ಉದಾಹರಣೆಗಳು ಇದ್ದವು. ಹೀಗಾಗಿಯೇ ಈ ಹೊಸ ಕಾನೂನು ತ್ವರಿತ ನ್ಯಾಯ ಒದಗಿಸುತ್ತವೆ.

ವಸಾಹತುಶಾಹಿ ಕಾನೂನುಗಳನ್ನು ಕೊನೆಗೊಳಿಸಲೆಂದು ಭಾರತೀಯರೇ ಭಾರತೀಯರಿಗಾಗಿ ಭಾರತೀಯ ಸಂಸತ್‌ ರೂಪಿಸಿದ ಮೂರು ಕಾನೂನುಗಳಿವು. ನಾವು ಕೇವಲ ಕಾನೂನುಗಳ ಹೆಸರು ಬದಲಾಯಿಸಿಲ್ಲ. ಇವುಗಳ ಸ್ವರೂಪ, ಅವುಗಳ ಆತ್ಮ ಮತ್ತು ಚೈತನ್ಯವೂ ಭಾರತೀಯವೇ ಆಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಆದರೂ ವಿರೋಧ ಪಕ್ಷಗಳು ಮಾತ್ರ ಇವುಗಳನ್ನು ವಿರೋಧಿಸುತ್ತಿವೆ. ಏನೇ ಆಗಲಿ, ಕಾನೂನು ಜನರಿಗೆ ತ್ವರಿತ ನ್ಯಾಯ ನೀಡಲಿ, ಬಡವರಿಗೆ ನ್ಯಾಯ ಸಿಗುವಂತಾಗಲಿ. ನ್ಯಾಯ ಎಲ್ಲರನ್ನೂ ಸಮಾನವಾಗಿ ನೋಡಲಿ…ಅಲ್ಲವೇ?

Tags: New law enforcement in the country from today
ShareTweetSendShare
Join us on:

Related Posts

ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

by Shwetha
September 7, 2026
0

ಇಂದೋರ್: ರಾಷ್ಟ್ರಗೀತೆ ಮತ್ತು ಸಂವಿಧಾನದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಅನುಸರಿಸುತ್ತಿರುವ ಧೋರಣೆಯನ್ನು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅನುರಾಗ್ ಠಾಕೂರ್ ತೀವ್ರವಾಗಿ ತರಾಟೆಗೆ...

ಪಾಕಿಸ್ತಾನದ ನೆಲಕ್ಕೆ ನುಗ್ಗಿ ಹೊಡೆಯುವ ಶಕ್ತಿ ಭಾರತಕ್ಕಿದೆ: ದೆಹಲಿಯಲ್ಲಿ ಮೋದಿ ಗುಡುಗು

ಪಾಕಿಸ್ತಾನದ ನೆಲಕ್ಕೆ ನುಗ್ಗಿ ಹೊಡೆಯುವ ಶಕ್ತಿ ಭಾರತಕ್ಕಿದೆ: ದೆಹಲಿಯಲ್ಲಿ ಮೋದಿ ಗುಡುಗು

by Shwetha
September 7, 2026
0

ನವದೆಹಲಿ: ಭಾರತದ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ನೆರೆ ರಾಷ್ಟ್ರದ ಗಡಿಯೊಳಗೆ ನುಗ್ಗಿ ಸದೆಬಡಿಯಲು ನಮ್ಮ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ...

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

by Shwetha
September 6, 2026
0

ಬಾಲಿವುಡ್‌ನ ಜನಪ್ರಿಯ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ನಟ ಅಕ್ಷಯ್ ಕುಮಾರ್ ಕುತೂಹಲಕಾರಿ ಸಂಗತಿಯೊಂದನ್ನು...

ಟಿವಿಕೆ ಮೈತ್ರಿಕೂಟದಿಂದ ಕಾಂಗ್ರೆಸ್‌ ಹಿಂದೆ ಸರಿಯುವ ಎಚ್ಚರಿಕೆ

ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಒಪ್ಪದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ-ಸೆಪ್ಟೆಂಬರ್ 9ರ ಸಭೆಯಲ್ಲಿ ಮೈತ್ರಿಕೂಟದ ಭವಿಷ್ಯ ನಿರ್ಧಾರ: ವಿಜಯ್ ಸರ್ಕಾರದ ಬುಡ ಅಲ್ಲಾಡಿಸುತ್ತಿದೆಯೇ ಪ್ರಧಾನಿ ಪಟ್ಟದ ಆಸೆ!

by Shwetha
September 6, 2026
0

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಕಾಂಗ್ರೆಸ್ ನಡುವೆ 2029ರ ಲೋಕಸಭಾ ಚುನಾವಣೆಯ...

ಮತದಾರರ ಪಟ್ಟಿ ಪರಿಷ್ಕರಣೆ ತಂದ ಅಪರೂಪದ ಪುನರ್ಮಿಲನ: 35 ವರ್ಷಗಳ ಬಳಿಕ ಒಂದಾದ ಅಣ್ಣ-ತಮ್ಮ

ಮತದಾರರ ಪಟ್ಟಿ ಪರಿಷ್ಕರಣೆ ತಂದ ಅಪರೂಪದ ಪುನರ್ಮಿಲನ: 35 ವರ್ಷಗಳ ಬಳಿಕ ಒಂದಾದ ಅಣ್ಣ-ತಮ್ಮ

by Shwetha
September 6, 2026
0

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸಾಮಾನ್ಯವಾಗಿ ಮತದಾರರ ಮಾಹಿತಿಯನ್ನು ನವೀಕರಿಸುವ ಆಡಳಿತಾತ್ಮಕ ಕಾರ್ಯ. ಆದರೆ, ಇದೇ ಪ್ರಕ್ರಿಯೆ ಮೂರೂವರೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram