ಹಳ್ಳದಲ್ಲಿ ತೇಲಿಬಂದ 7 ಭ್ರೂಣಗಳು – ಹೌಹಾರಿದ ಮೂಡಲಗಿ ಜನ….

1 min read

ಹಳ್ಳದಲ್ಲಿ ತೇಲಿಬಂದ 7 ಭ್ರೂಣಗಳು – ಹೌಹಾರಿದ ಮೂಡಲಗಿ ಜನ….

ಏಳು ಭ್ರೂಣಗಳ ಮೃತದೇಹಗಳನ್ನ ಡಬ್ಬಿಯಲ್ಲಿ ಹಾಕಿ ಹಳ್ಳದಲ್ಲಿ ಬಿಸಾಡಿರುವ ಹೀನಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.  ಭ್ರೂಣಗಳ ಮೃತದೇಹಗಳನ್ನ ನೋಡಿದ ಜನ ಹೌಹಾರಿದ್ದಾರೆ.

ಮೂಡಲಗಿ ಪಟ್ಟಣದ ಹೊರವಲಯದಲ್ಲಿರುವ ಹಳ್ಳಕ್ಕೆ ಕಿರಾತಕರು ಏಳು ಭ್ರೂಣಗಳ ಮೃತದೇಹವನ್ನು ಎಸೆದಿದ್ದಾರೆ. ಐದು ಡಬ್ಬದಲ್ಲಿ ಏಳು ಭ್ರೂಣಗಳನ್ನು ಹಾಕಿ ಹಳ್ಳಕ್ಕೆ ಎಸೆದಿರುವುದು ಪತ್ತೆಯಾಗಿದ್ದು, ಇದನ್ನು ಯಾರು ಎಸೆದರು? ಏಕೆ ಎಸೆದರು? ಎನ್ನುವುದು ನಿಗೂಢವಾಗಿದೆ.

ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಭ್ರೂಣ ಪತ್ತೆಯಾದ ನಂತರ ಹೇಳಿಕೆ ನೀಡಿರುವ ಡಿಎಚ್ಒ ಡಾ. ಮಹೇಶ್ ಕೋಣಿ “ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಗಳ ಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಇವೆಲ್ಲವೂ ಐದು ತಿಂಗಳ ಭ್ರೂಣಗಳಾಗಿವೆ. ದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎನ್ನುವ ಬಗ್ಗೆ ತನಿಖೆ ಮಾಡಲಾಗುವುದು. ಭ್ರೂಣಗಳ ಹತ್ಯೆ ಕುರಿತು ತನಿಖೆಗೆ ಒಂದು ತಂಡ ಸಹ ರಚನೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd