ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಪುಲ್ವಾಮಾ ಹುತಾತ್ಮ ಮೇಜರ್ ವಿಭೂತಿ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಕೌಲ್

1 min read
Nitika Kaul

ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಪುಲ್ವಾಮಾ ಹುತಾತ್ಮ ಮೇಜರ್ ವಿಭೂತಿ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಕೌಲ್

ಪುಲ್ವಾಮಾದಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ, ನಿತಿಕಾ ಕೌಲ್ ಶನಿವಾರ ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರು ಸ್ಟಾರ್ ಪ್ರಧಾನ ಮಾಡಿದರು.
ಇವರು ತಮಿಳುನಾಡಿನ ಚೆನ್ನೈನಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತೀರ್ಣಗೊಂಡಿದ್ದಾರೆ.
Nitika Kaul

ರಕ್ಷಣಾ ಸಚಿವಾಲಯದ ಪಿ.ಆರ್.ಒ ಉಧಂಪುರ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಂಕ್ಷಿಪ್ತ ವೀಡಿಯೊವನ್ನು ಹಂಚಿಕೊಂಡಿದ್ದು, ನಿತಿಕಾ ಕೌಲ್ ಗೆ ಅಭಿನಂದನೆ ತಿಳಿಸಿದೆ.
2019 ರಲ್ಲಿ # ಪುಲ್ವಾಮಾದಲ್ಲಿ ಹುತಾತ್ಮರಾದ # ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಚಕ್ರವನ್ನು ನೀಡಿ ಗೌರವಿಸಿತ್ತು. ಇಂದು ಅವರ ಪತ್ನಿ ನಿತಿಕಾಕೌಲ್ ಇಂಡಿಯನ್ ಆರ್ಮಿ ಸಮವಸ್ತ್ರ ಧರಿಸುವ ಮೂಲಕ ಅವರಿಗೆ ಸೂಕ್ತವಾದ ಗೌರವವನ್ನು ಸಲ್ಲಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರ ಹೆಮ್ಮೆಯ ಕ್ಷಣ‌ ಎಂದು ಪಿ.ಆರ್.ಒ ಉಧಾಂಪುರ್ ಟ್ವಿಟರ್‌ನಲ್ಲಿ ಬರೆದಿದೆ.

ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಹುತಾತ್ಮರಾಗುವ ಕೇವಲ ಒಂಬತ್ತು ತಿಂಗಳು ಮೊದಲು ನಿತಿಕಾ ಕೌಲ್ ಅವರನ್ನು ವಿವಾಹವಾಗಿದ್ದರು. ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಅವರ ಅಂತಿಮ ವಿದಾಯದ ಸಂದರ್ಭದಲ್ಲಿ ನಿತಿಕಾ ಕೌಲ್, ನೀವು ನನಗಿಂತ ಹೆಚ್ಚು ದೇಶವನ್ನು ಪ್ರೀತಿಸುತ್ತಿದ್ದಿರಿ. ಇದೇ ಕಾರಣಕ್ಕೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದೀರಿ. ನನ್ನ ಕೊನೆ ಉಸಿರಿರುವವರೆಗೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹಣೆಗೆ ಮುತ್ತಿಟ್ಟು ಅಂತಿಮ ವಿದಾಯ ಹೇಳಿದಾಗ ಇಡೀ ದೇಶವೇ ಅಂದು ಕಂಬನಿ ಮಿಡಿದಿತ್ತು.
ಪತಿಯಂತೆ ದೇಶಸೇವೆ ಸಲ್ಲಿಸಲು ನಿರ್ಧರಿಸಿದ ನಿತಿಕಾ ಕೌಲ್, ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಹುತಾತ್ಮರಾದ ಆರು ತಿಂಗಳ ನಂತರ ಎಸ್ ಎಸ್ ಸಿಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಬಳಿಕ ‌ ಚೆನ್ನೈನಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಆರಂಭಿಸಿದರು.
wearing masks
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#Nitika #Kaul #indian #army

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd