Nitin Menon : ಒಂದಲ್ಲ ಎರಡಲ್ಲ ಮೂರು ಬಾರಿ ಕಳಪೆ ತೀರ್ಪು ನೀಡಿದ ಅಂಪೈರ್
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರು ಮೂರನೇ ಟೆಸ್ಟ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 109 ರನ್ ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಒಂದು ವಿಕೆಟ್ ಕಳೆದುಕೊಂಡು 70 ರನ್ ಗಳಿಸದೆ.
ಈ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ಮೆನನ್ ಕಳಪೆ ಅಂಪಯರಿಂಗ್ ನಿಂದಾಗಿ ಮತ್ತೆ ಟಿಕೆಗೆ ಗುರಿಯಾಗಿದ್ದಾರೆ. ರೋಹಿತ್ ಶರ್ಮಾ ಎರಡು ಭಾರಿ ಔಟಾಗಿದ್ದರೂ ಔಟ್ ತೀರ್ಪು ನೀಡದ ನಿತಿನ್ ರವೀಂದ್ರ ಜಡೆಜಾಗೆ ಔಟ್ ಅಲ್ಲದ ಔಟ್ ನೀಡಿ ಕಳೆಪೆ ತೀರ್ಪು ನೀಡಿದ್ದಾರೆ. ಜಡೆಜಾ ಡಿ ಆರ್ ಎಸ್ ತೆಗೆದುಕೊಳ್ಳುವ ಮೂಲಕ ಬದುಕುಳಿದಿದ್ದಾರೆ.
ಭಾರತ ಆಸ್ಟ್ರೇಲಿಯಾ ನಡುವಿನ ಎರಡನೆ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಮತ್ತು ಪ್ಯಾಡ್ ಗೆ ಬಡಿದಿದ್ದ ಎಸೆತಕ್ಕೆ ನಿತಿನ್ ಮೆನನ್ ಔಟ್ ಎಂದು ತಪ್ಪಾಗಿ ತೀರ್ಪು ನೀಡಿದ್ದರು. ರಿಪ್ಲೆಯಲ್ಲಿ ಬೌಲ್ ಬ್ಯಾಟಿಗೆ ತಾಗಿರುವುದು ಸ್ಪಷ್ಟವಾಗಿ ಕಾಣಿಸಿದ್ದರು ನಿತಿನಿ ಮೊದಲ ತೀರ್ಮಾನಕ್ಕೆ ಬದ್ದರಾದರು. ಇದು ಸಾಕಷ್ಟು ಟೀಕೆಗಳಿಗೆ ಕಾರಣವಾಗಿತ್ತು.
ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಓವರ್ ನ ಮೊದಲ ಎಸೆತದಲ್ಲೇ ಬಾಲ್ ರೋಹಿತ್ ಶರ್ಮಾ ಬ್ಯಾಟ್ ಸವರಿಕೊಂಡು ಕೀಪರ್ ಕೈ ಸೇರಿತು. ಆಸ್ಟ್ರೇಲಿಯಾ ಔಟ್ ಮನವಿಯನ್ನ ತಿರಸ್ಕರಿಸಿದ ಅಂಪೈರ್ ನಿತಿನ್ ಮೆನನ್ ನಾಟ್ ಔಟ್ ಎಂದು ತಲೆ ಅಲ್ಲಾಡಿಸಿದರು. ಆಸೀಸ್ ಕೂಡ ಡಿ ಆರ್ ಎಸ್ ಮನವಿ ಸಲ್ಲಿಸಲಿಲ್ಲ. ಆದರೇ ರಿಪ್ಲೇ ಯಲ್ಲಿ ಬಾಲ್ ಬ್ಯಾಟ್ ಗೆ ಸವರಿದ್ದು ಸ್ಪಷ್ಟವಾಗಿತ್ತು. ಅದೇ ಓವರ್ ನ ನಾಲ್ಕನೇ ಎಸೆತ ಸಹ ಮಿಚೆಲ್ ಸ್ಟಾರ್ಕ್ ಮನವಿಯನ್ನ ಪುರಸ್ಕರಿಸಲಿಲ್ಲ .
ಅಷ್ಟೇ ಅಲ್ಲದೇ 11ನೇ ಓವರ್ ನಲ್ಲಿ ನಾಥನ್ ಲಿಯಾನ್ ಅವರ ನಾಲ್ಕನೇ ಎಸೆತ ರವೀಂದ್ರ ಜಡೇಜಾ ಅವರ ಪ್ಯಾಡ್ ಗೆ ಬಡಿದಿತ್ತು. ನಾಥನ್ ಲಿಯಾನ್ ಬಲವಾಗಿ ಮನವಿ ಮಾಡಿದಾಗ, ನಿತಿನ್ ಮೆನನ್ ಔಟ್ ಎಂದು ಘೋಷಿಸಿದರು. ಅಂಪೈರ್ ಬೆರಳು ಎತ್ತಿದ ತಕ್ಷಣ ರವೀಂದ್ರ ಜಡೇಜಾ ಡಿಆರ್ ಎಸ್ ತೆಗೆದುಕೊಂಡರು. ಚೆಂಡು ಮೊದಲು ಬ್ಯಾಟ್ಗೆ ಬಡಿದಿದೆ ಎಂದು ಟಿ ವಿ ರೀಪ್ಲೆಯಲ್ಲಿ ಕಾಣಿಸಿತು .ಒಂದೇ ದಿನದಲ್ಲಿ ಮೂರು ಬಾರಿ ತಪ್ಪು ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಿತಿನ್ ಮೆನನ್ ಅಂಪೈರಿಂಗ್ ಬಗ್ಗೆ ಟ್ರೋಲ್ ಮಾಡುಲು ಮಂದಿ ಶುರುಮಾಡಿದ್ದಾರೆ.
Nitin Menon: The umpire who gave poor judgment not once, not twice but thrice