ಕೆಆರ್ಎಸ್ KRS ಅಣೆಕಟ್ಟೆಯಲ್ಲಿ ಬಿರುಕು ಇಲ್ಲ : ಕಾವೇರಿ ನೀರಾವರಿ ನಿಗಮದ ಸ್ಪಷ್ಟನೆ
ಮಂಡ್ಯ : ಕೆಆರ್ ಎಸ್ ಡ್ಯಾಂನಲ್ಲಿ ಬಿಕುರು ಬಿಟ್ಟಿದೆ ಎಂಬ ವಿಚಾರ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿದೆ.
ಕೆಆರ್ಎಸ್ ಅಣೆಕಟ್ಟೆಯಲ್ಲಿ ಯಾವುದೇ ಬಿರುಕು ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ಮಾಹಿತಿ ನೀಡಿದ್ದಾರೆ.
ಅಣೆಕಟ್ಟೆಯಲ್ಲಿ ಯಾವುದೇ ರೀತಿಯ ಬಿರುಕು ಕಂಡುಬಂದಿಲ್ಲ. ಮಳೆಗಾಲ ಆರಂಭಕ್ಕೂ ಮೊದಲು ಅಣೆಕಟ್ಟೆ ಸುರಕ್ಷತೆ ಪರಿಶೀಲನೆ ನಡೆಸಲಾಗಿದೆ.
ಸುರಕ್ಷತಾ ಪರಿಶೀಲನಾ ಸಮಿತಿ ತಪಾಸಣೆ ನಡೆಸಿದೆ. ಅಣೆಕಟ್ಟೆಯ ಪ್ರಧಾನ ಗೋಡೆಯಲ್ಲಿ ಎಲ್ಲಿಯೂ ಬಿರುಕು ಅಥವಾ ರಚನಾತ್ಮಕ ದೋಷಗಳು ಪತ್ತೆಯಾಗಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ಮಾಹಿತಿ ನೀಡಿದ್ದಾರೆ.
ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಅವರು ಹೇಳಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯವಾಗಿ ಭಾರಿ ಸಂಚಲನವನ್ನೇ ಸೃಷ್ಠಿ ಮಾಡಿದೆ.