ಬಾಲಿವುಡ್ ನಟ ದೇವ್ ಆನಂದ್ ಅವರು ಸಾಕಷ್ಟು ಆಸ್ತಿ ಮಾಡಿದ್ದರು. ಇವರು ಮುಂಬಯಿಯಲ್ಲಿ ಬಹುಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರು. ಆದರೆ, ಅವರು ನಿಧನರಾಗಿದ್ದರಿಂದಾಗಿ ಅವರ ಆಸ್ತಿ ನೋಡಿಕೊಳ್ಳಲು ಆಗದೆ, ಭರ್ಜರಿ ದರಕ್ಕೆ ಮಾರಾಟ ಮಾಡಲಾಗಿದೆ.
ದೇವ್ ಆನಂದ್ ಅವರು, 2011ರಲ್ಲಿ ನಿಧನರಾಗಿದ್ದರು. ಅವರ ಮಕ್ಕಳು ಮುಂಬಯಿ ತೊರೆದು ಬೇರೆ ಬೇರೆ ಕಡೆಗೆ ನೆಲೆಸಿದ್ದರಿಂದಾಗಿ ದೇವ್ ಆನಂದ್ ಒಡೆತನದ ಬಂಗಲೆಯೊಂದನ್ನು (Dev Anand Bungalow) ಬರೋಬ್ಬರಿ 400 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.
ಮುಂಬಯಿನ ಶ್ರೀಮಂತರ ಏರಿಯಾ ಎಂದೇ ಫೇಮಸ್ ಆಗಿರುವ ಜುಹೂ ಪ್ರದೇಶದಲ್ಲಿ ಈ ಜಾಗದಲ್ಲಿ ದೇವ್ ಆನಂದ್ ಅವರ ಬಂಗಲೆ ಇದೆ. ಇದನ್ನು ಒಂದು ರಿಯಲ್ ಎಸ್ಟೇಟ್ ಕಂಪನಿ ಮುಗಿದಿದ್ದು, ಬಂಗಲೆಯನ್ನು ನೆಲಸಮ ಮಾಡಿ, ಅಲ್ಲಿ 22 ಮಹಡಿಯ ಕಟ್ಟಡವನ್ನು ನಿರ್ಮಿಸಲು ಪ್ಲ್ಯಾನ್ ಸಿದ್ಧವಾಗಿದೆ ಎನ್ನಲಾಗಿದೆ.