ಪ್ರಾಣಿ ಪಕ್ಷಿಗಳ ಧ್ವನಿ ಹೆಚ್ಚಿಸುತ್ತಿದೆ ಶಬ್ದ ಮಾಲಿನ್ಯ – ಮಾನವನ ಹೃದಯಕ್ಕೂ ಅಪಾಯ
ಜಗತ್ತಿನಲ್ಲಿ ಶಬ್ದ ಮಾಲಿನ್ಯ ವೇಗವಾಗಿ ಹೆಚ್ಚಾಗುತ್ತಿದೆ ಇದರಿಂದ ಮನುಷ್ಯರು, ಪ್ರಾಣಿಗಳು, ಸಸ್ಯಗಳಿಗೂ ಸಾಕಷ್ಟು ಹಾನಿಯುಂಟಾಗುತ್ತಿದೆ. ದೊಡ್ಡ ನಗರಗಳಿಂದ ಹಿಡಿದು ಚಿಕ್ಕಪುಟ್ಟ ಪಟ್ಟಣಗಳ ವರೆಗೂ ಎಲ್ಲರೂ ಶಬ್ದ ಮಾಲಿನ್ಯಕ್ಕೆ ಗುರಿಯಾಗುತ್ತಿದ್ದಾರೆ ಇದು ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ.
ಹೃದಯ ಕಾಯಿಲೆಗೆ ಶಬ್ದ ಕಾರಣ
ಅತಿಯಾದ ಶಬ್ದವು ಚಯಾಪಚಯ ರೋಗಗಳು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹೃದಯಾಘಾತದ ಅಪಾಯವೂ ಇದೆ. ಯುರೋಪ್ನಲ್ಲಿ, 48,000 ಜನರು ಹೃದ್ರೋಗದಿಂದ ಬಳಲುತ್ತಿದ್ದಾರೆ. ಜೋರಾಗಿ ಮತ್ತು ನಿರಂತರ ಶಬ್ದದಿಂದಾಗಿ ಪ್ರತಿ ವರ್ಷ ಸುಮಾರು 12,000 ಅಕಾಲಿಕ ಮರಣಗಳು ಸಂಭವಿಸುತ್ತವೆ.
ಜರ್ಮನ್ ಫೆಡರಲ್ ಎನ್ವಿರಾನ್ಮೆಂಟ್ ಏಜೆನ್ಸಿಯ (ಯುಬಿಎ) ಶಬ್ದ ತಜ್ಞ ಥಾಮಸ್ ಮೈಕ್ ಹೇಳುತ್ತಾರೆ, ‘ಫ್ಲಾಟ್ ಅಥವಾ ಮನೆ ಮುಖ್ಯ ರಸ್ತೆಯಲ್ಲಿದ್ದರೆ, ಬಾಡಿಗೆಯನ್ನು ಕಡಿಮೆ ಪಾವತಿಸಬೇಕಾಗುತ್ತದೆ. ಇದರರ್ಥ ಕಡಿಮೆ ಆದಾಯ ಹೊಂದಿರುವ ಜನರು ಹೆಚ್ಚು ಗದ್ದಲ ಇರುವ ಸ್ಥಳಗಳಲ್ಲಿ ವಾಸಿಸುವ ಸಾಧ್ಯತೆಯಿದೆ.
ಜೋರಾಗಿ ಕೂಗಲು ಪ್ರಾರಂಭಿಸಿದ ಪಕ್ಷಿಗಳು
ಶಬ್ದ ಮಾಲಿನ್ಯದ ಪರಿಣಾಮ ಪ್ರಾಣಿಗಳ ಮೇಲೂ ಬೀಳುತ್ತಿದೆ. ಎಲ್ಲಾ ಪ್ರಾಣಿ ಪ್ರಭೇದಗಳ ವರ್ತನೆಯಲ್ಲಿ ಬದಲಾವಣೆಗಳನ್ನ ಉಂಟುಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ, ಶಬ್ದ ಮಾಲಿನ್ಯದಿಂದ ಪಕ್ಷಿಗಳು ಸಂದೇಶ ರವಾನಿಸಲು ಅಥವಾ ತಮ್ಮ ಗುಂಪುಗಳ ಜೊತೆ ಸಂಭಾಷಿಸಲು ಜೋರಾಗಿ ಕೂಗಬೇಕಾದ ಪರಿಸ್ಥಿತಿ ಬಂದೊದಗಿದೆ. ನಗರಗಳಲ್ಲಿ ಈ ಪರಿಸ್ಥಿತಿ ಇನ್ನೂ ಹೆಚ್ಚಾಗಿದೆ.
ಯುರೋಪ್, ಜಪಾನ್ ಅಥವಾ ಬ್ರಿಟನ್ನ ನಗರಗಳಲ್ಲಿ ವಾಸಿಸುವ ಹಕ್ಕಿಗಳು ಕಾಡುಗಳಲ್ಲಿ ವಾಸಿಸುವ ಹಕ್ಕಿಗಳಿಗಿಂತ ಜೋರಾಗಿ ಕೂಗುತ್ತವೆ. ರಸ್ತೆ ಬದಿಯ ಕೀಟಗಳು, ಮಿಡತೆಗಳು ಮತ್ತು ಕಪ್ಪೆಗಳ ಧ್ವನಿಯಲ್ಲಿಯೂ ಬದಲಾವಣೆಗಳನ್ನು ಗಮನಿಸಲಾಗಿದೆ
ಲಂಡನ್ನಿಂದ ಢಾಕಾವರೆಗೆ ಮತ್ತು ಬಾರ್ಸಿಲೋನಾದಿಂದ ಬರ್ಲಿನ್ವರೆಗೆ ಎಲ್ಲಾ ನಗರಗಳು ಹೆಚ್ಚು ಗದ್ದಲದಿಂದ ಕೂಡಿವೆ. ನ್ಯೂಯಾರ್ಕ್ನಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವ 90% ಜನರು ಸಾಮಾನ್ಯ ಮಿತಿಗಿಂತ ಹೆಚ್ಚಿನ ಶಬ್ದವನ್ನ ಅನುಭವಿಸುತ್ತಿದ್ದಾರೆ. ಇದು ಕಿವುಡು ತನಕ್ಕೆ ಕಾರಣವಾಗಬಹುದು.