ಪಾಕ್ ನಲ್ಲಿ ಜಿಹಾದ್ ಹೆಸರಿನಲ್ಲಿ ಹಣ ಸಂಗ್ರಹಿಸೋದು ದೇಶದ್ರೋಹಕ್ಕೆ ಸಮ
ಲಾಹೋರ್: ಪಾಕಿಸ್ತಾನದಲ್ಲಿ ಜಿಹಾದ್ ಹೆಸರಿನಲ್ಲಿ ನಿಧಿ ಸಂಗ್ರಹಿಸಲು ಜನರನ್ನು ಪ್ರಚೋದಿಸುವುದು ದೇಶದ್ರೋಹಕ್ಕೆ ಸಮ ಎಂದು ಲಾಹೋರ್ ಹೈಕೋರ್ಟ್ ತೀರ್ಪು ನೀಡಿದೆ.
ಯಾವುದೇ ಯುದ್ಧವನ್ನು ಘೋಷಿಸಿದ್ರೆ ಅದಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸುವುದು ದೇಶದ ಕೆಲಸ ಎಂದು ಕೋರ್ಟ್ ಪ್ರಕಟಿಸಿದೆ.
Not allowed-raise-funds-jihad-pakistan
ಇತ್ತೀಚೆಗೆ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾದ ಇಬ್ಬರು ಭಯೋತ್ಪಾದಕರ ಮೇಲ್ಮನವಿಗಳನ್ನು ವಜಾಗೊಳಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿ ಈ ತೀರ್ಪನ್ನ ಪ್ರಕಟಿಸಿದೆ.
Pakistan | ಜಿಹಾದ್ ಹೆಸರಿನಲ್ಲಿ ಹಣ ಸಂಗ್ರಹಿಸೋದು ದೇಶದ್ರೋಹಕ್ಕೆ ಸಮ
ತೆಹ್ರೀಕ್-ಎ-ತಾಲಿಬಾನ್ ನಿಷೇಧಿತ ಸಂಘಟನೆಯಾಗಿದೆ. ದೇಶಕ್ಕೆ ಸಾಕಷ್ಟು ಹಾನಿ ಮಾಡಿದೆ. ದೇಶದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸಿದೆ.
ಹಣಕಾಸಿನ ನೆರವು ಇಲ್ಲದೆ ಇದೆಲ್ಲವೂ ಸಾಧ್ಯವಿಲ್ಲ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಒದಗಿಸಿದ ಆರೋಪದಲ್ಲಿ ಈ ತಿಂಗಳು ಬಂಧಿಸಲ್ಪಟ್ಟ ಇಬ್ಬರು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರರಿಗೆ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.