ಮನೆಬಾಗಿಲಿಗೆ 10 ಜನಪ್ರಿಯ ದೇವಾಲಯಗಳ ಪ್ರಸಾದ !
ತೆಲಂಗಾಣದಲ್ಲಿ, ದಿ ಎಂಡೋಮೆಂಟ್ಸ್ ಡಿಪಾರ್ಟ್ಮೆಂಟ್ ಮತ್ತು ಇಂಡಿಯಾ ಪೋಸ್ಟ್ ಜೊತೆಗೂಡಿ ಸ್ಪೀಡ್ ಪೋಸ್ಟ್ ಸೇವೆಯನ್ನು ಬಳಸಿಕೊಂಡು 10 ಜನಪ್ರಿಯ ದೇವಾಲಯಗಳ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ.
ಶನಿವಾರ, ದತ್ತಿ ಸಚಿವ ಎ ಇಂದ್ರಕರನ್ ರೆಡ್ಡಿ ಅವರು ಪ್ರಸಾದವನ್ನು ಒಣ ಹಣ್ಣುಗಳ ರೂಪದಲ್ಲಿ ನೀಡಲಾಗುವುದು ಎಂದು ಬಹಿರಂಗಪಡಿಸಿದರು. ಇದಕ್ಕಾಗಿ ಭಕ್ತರು ಅಗತ್ಯ ಶುಲ್ಕವನ್ನು ಪಾವತಿಸಿ ಹತ್ತಿರದ ಅಂಚೆ ಕಚೇರಿಯಲ್ಲಿ ಕಾಯ್ದಿರಿಸಬಹುದು. ಇದನ್ನು ಸುಮಾರು 2 ರಿಂದ 3 ದಿನಗಳಲ್ಲಿ ರಾಜ್ಯದೊಳಗಿನ ಭಕ್ತರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈ ಸೇವೆಯನ್ನು ದೇಶಾದ್ಯಂತ 1.6 ಲಕ್ಷ ಅಂಚೆ ಕಚೇರಿಗಳ ಮೂಲಕ ವಿಸ್ತರಿಸಲಾಗುತ್ತಿದೆ.
ಮನೆಗೆ ಪ್ರಸಾದ ತಲುಪಿಸುವ 10 ಜನಪ್ರಿಯ ದೇವಾಲಯಗಳ ಪಟ್ಟಿಯಲ್ಲಿ ಯಾದಗಿರಿಗುಟ್ಟದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ, ಭದ್ರಾಚಲಂನ ಶ್ರೀ ಸೀತಾರಾಮ ರಾಮಚಂದ್ರ ಸ್ವಾಮಿ ದೇವಸ್ಥಾನ, ಬಸಾರದಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನ, ಅಂಜನೇಯ ಸ್ವಾಮಿ ದೇವಾಲಯ ಕೊಂಡಗಟ್ಟು, ಕೋಮರ್ವೆಲ್ಲಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಸಿಕಂದರಾಬಾದ್ನ ಶ್ರೀ ಉಜ್ಜೈನಿ ಮಹಂಕಾಳಿ ದೇವಸ್ಥಾನ ಮತ್ತು ಗಣೇಶ ದೇವಸ್ಥಾನ, ಬಾಲ್ಕಂಪೇಟೆಯ ಯೆಲ್ಲಮ್ಮ-ಪೋಚಮ್ಮ ದೇವಸ್ಥಾನ,ಕರ್ಮನ್ಘಾಟ್ನಲ್ಲಿರುವ ಶ್ರೀ ಹನುಮಾನ್ ದೇವಸ್ಥಾನ ಸೇರಿದೆ.
ಆದಾಗ್ಯೂ, ಆನ್ಲೈನ್ ಬುಕಿಂಗ್ ಜೊತೆಗೆ ಎಂಡೋಮೆಂಟ್ಸ್ ಇಲಾಖೆಯು ಭಕ್ತರಿಗೆ ಅಂಚೆ ಕಚೇರಿಗಳ ಮೂಲಕ ನಿಗದಿತ ದೇವಾಲಯಗಳಲ್ಲಿ ಆಫ್ಲೈನ್ ಅರ್ಜಿತ ಸೇವೆಗಳನ್ನು ಕಾಯ್ದಿರಿಸಲು ಅನುಕೂಲ ಮಾಡಿಕೊಡುತ್ತಿದೆ.
ಈ ಸೇವೆಯು ಮುಖ್ಯವಾಗಿ ಆನ್ಲೈನ್ನಲ್ಲಿ ಸೇವಾಗಳನ್ನು ಕಾಯ್ದಿರಿಸಲು ಸಾಧ್ಯವಾಗದವರ ಅನುಕೂಲಕ್ಕಾಗಿ ಇದೆ.
ಬುಕಿಂಗ್ ಮಾಡಿದ ನಂತರ, ಆಯಾ ದೇವಾಲಯದ ವ್ಯವಸ್ಥಾಪಕರು ಭಕ್ತರ ಆದ್ಯತೆಯ ಸೇವೆಯನ್ನು ಮಾಡುತ್ತಾರೆ.
ಎಲೆಕೋಸು ಅಥವಾ ಕ್ಯಾಬೇಜ್ ನ ಆರೋಗ್ಯ ಪ್ರಯೋಜನಗಳು https://t.co/V78dO1U9BF
— Saaksha TV (@SaakshaTv) March 23, 2021
ಪಾಲಕ್ ಪನೀರ್ https://t.co/j2Hh1uVmAo
— Saaksha TV (@SaakshaTv) March 23, 2021
ನಟಿ ಪ್ರೀತಿ ಜಿಂಟಾಗೆ ಕಿಸ್ ಮಾಡಿದ ರಿತೇಶ್, ಕೊಪಗೊಂಡು ಪತಿಗೆ ಹೊಡೆತ ನೀಡಿದ ಜೆನಿಲಿಯಾ !#entertainment #bollywood #cinema https://t.co/8Gm3XcVZnr
— Saaksha TV (@SaakshaTv) March 22, 2021
ಐದು ವರ್ಷಗಳ ಕಾಲಾವಧಿಗೆ ಉನ್ನತ ಭದ್ರತಾ ನೋಂದಣಿ ಫಲಕ( HSRP) ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ https://t.co/EFd7Nev5RZ
— Saaksha TV (@SaakshaTv) March 22, 2021
#prasadam #online