ಗರ್ಭಿಣಿಯಾದ್ರೂ ಸೋಂಕಿತರಿಗೆ ಚಿಕಿತ್ಸೆ ಕೊಟ್ಟ ನರ್ಸ್ – ಮಗುವಿಗೆ ಜನ್ಮ ಕೊಟ್ಟು ಪ್ರಾಣ ಬಿಟ್ಟರು
ಛತ್ತೀಸ್ ಗಢ : ಕೊರೊನಾ ಸಂಕಷ್ಟದ ಸಮಯದಲ್ಲಿ ವೈದ್ಯರು ಹಗಲಿರುಳು ಸೋಂಕಿತರ ಚಿಕಿತ್ಸೆಗಾಗಿ ಶ್ರಮಿಸುತ್ತಿದ್ದಾರೆ.. ಈ ರೀತಿ ಕರ್ತವ್ಯ ನಿಷ್ಠೆ ಮೆರೆದ ಅನೇಕ ವೈದ್ಯರು ಇಹಲೋಕ ತ್ಯಜಿಸಿದ್ದಾರೆ.. ತಮ್ಮ ಪ್ರಾಣವನ್ನ ಪಣಕಿಟ್ಟು ಕೆಲಸ ಮಾಡ್ತಿದ್ದಾರೆ.
ಇದೀಗ 9 ತಿಂಗಳು ಗರ್ಭಿಣಿಯಾಗಿದ್ರೂ ರಜೆ ಪಡೆಯದೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಮಗುವಿಗೆ ಜನ್ಮ ನೀಡಿದ ಬಳಿಕ ಮೃತಪಟ್ಟಿರುವ ಘಟನೆ ಛತ್ತೀಸಗಢದ ಲಿಮೋ ಗ್ರಾಮದಲ್ಲಿ ನಡೆದಿದೆ.
ಪ್ರಭಾ ಮೃತ ನರ್ಸ್ ಆಗಿದ್ದಾರೆ. ಇವರು ಲಿರೋಮಿ ಜಿಲ್ಲೆಯ ಮುಗೇಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅದೇ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ನರ್ಸ್ ಪ್ರಭಾ ಕೊರೊನಾ ಕಾಲದಲ್ಲಿ ರಜೆ ಸಹ ಪಡೆದಿರಲಿಲ್ಲ. 9 ತಿಂಗಳು ಗರ್ಭಿಣಿಯಾಗಿದ್ರೂ ಕೋವಿಡ್ ವಾರ್ಡಿನಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು.
ಏಪ್ರಿಲ್ 30ರಂದು ಹೆರಿಗೆ ನೋವು ಕಾಣಿಸಿಕೊಂಡಾಗ ಕವಾರ್ಧ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಈ ವೇಳೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಪ್ರಭಾಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಹೆರಿಗೆ ಬಳಿಕ ಕೊರೊನಾ ಚಿಕಿತ್ಸೆಗೆ ಒಳಗಾಗಿದ್ದರು. ಪಲ್ಸ್ ರೇಟ್ ಕಡಿಮೆಯಾದ ಹಿನ್ನೆಲೆ ವೈದ್ಯರು ರಾಯ್ಪುರ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೇ 21 ರಂದು ಪ್ರಭಾ ಸಾವನ್ನಪ್ಪಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.