obesity cause cancer ? ಸ್ಥೂಲಕಾಯತೆ ಹೊಂದಿರುವುದು ಈ ರೀತಿಯ ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು….
ಸ್ಥೂಲಕಾಯತೆ ಎಂಬುದು ಅನಾರೋಗ್ಯಕರವಾದ ಕೊಬ್ಬು ದೇಹದಲ್ಲಿ ಶೇಕರಣೆಯಾಗುವ ಒಂದು ಕಾಯಿಲೆಯಾಗಿದೆ. ಆರೋಗ್ಯಕರ ತೂಕವನ್ನ ಹೊಂದಿರುವ ಜನರಿಗೆ ಹೋಲಿಸಿದರೆ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವವರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಸೇರಿದಂತೆ ಕನಿಷ್ಠ 13 ರೀತಿಯ ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನ ಹೊಂದಿರುತ್ತಾರೆ. ಅಧಿಕ ತೂಕ ಇದ್ದಾಕ್ಷಣ ಕ್ಯಾನ್ಸರ್ ಬರುತ್ತದೆ ಎಂದು ಇದರ ಅರ್ಥವಲ್ಲ. ಅಧಿಕ ತೂಕವನ್ನ ಹೊಂದಿದ್ದರೆ ಆರೋಗ್ಯಕರ ತೂಕ ಹೊಂದಿರವ ವ್ಯಕ್ತಿಗಿಂತ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರು ಕನಿಷ್ಠ 13 ವಿವಿಧ ರೀತಿಯ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಅವುಗಳೆಂದರೆ…
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್
ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್
ಅನ್ನನಾಳದ ಕ್ಯಾನ್ಸರ್ (ಅಡೆನೊಕಾರ್ಸಿನೋಮ)
ಪಿತ್ತಕೋಶದ ಕ್ಯಾನ್ಸರ್
ಕಿಡ್ನಿ ಕ್ಯಾನ್ಸರ್
ಯಕೃತ್ತಿನ ಕ್ಯಾನ್ಸರ್
ಮೆನಿಂಜಿಯೋಮಾ (ಮೆದುಳನ್ನು ಆವರಿಸಿರುವ ಪೊರೆಗಳ ಕ್ಯಾನ್ಸರ್)
ಬಹು ಮೈಲೋಮಾ
ಅಂಡಾಶಯದ ಕ್ಯಾನ್ಸರ್
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್
ಹೊಟ್ಟೆಯ ಕ್ಯಾನ್ಸರ್
ಥೈರಾಯ್ಡ್ ಕ್ಯಾನ್ಸರ್
ಗರ್ಭಾಶಯದ ಕ್ಯಾನ್ಸರ್
ದೇಹದಲ್ಲಿ ಹೆಚ್ಚುವರಿ ಕೊಬ್ಬು ಸುಮ್ಮನೆ ಕುಳಿತಿರುವುದಿಲ್ಲ, ಅದು ಸಕ್ರಿಯವಾಗಿದ್ದು, ದೇಹದ ಉಳಿದ ಭಾಗಗಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಈ ಸಂಕೇತಗಳು ನಮ್ಮ ದೇಹದಲ್ಲಿನ ಜೀವಕೋಶಗಳು ಹೆಚ್ಚು ಹೆಚ್ಚಾಗಿ ವಿಭಜಿಸಲು ಕಾರಣವಾಗುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು.
(ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಕೇವಲ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಇದನ್ನ ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು.
obesity cause cancer ? Being obese can lead to these types of cancers….








