Odisha : ತಂದೆಯನ್ನ ಕೊಂದು ಮಲತಾಯಿ ಮೇಲೆ ಅತ್ಯಾಚಾರವೆಸಗಿದ ಯುವಕ…
20 ವರ್ಷದ ಯುವಕನೊಬ್ಬ ತನ್ನ ತಂದೆಯನ್ನು ಕೊಂದು ನಂತರ ತನ್ನ ಮಲತಾಯಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ನಡೆದಿದೆ. ಟೋಮ್ಕಾ ಪೊಲೀಸ್ ಪ್ರದೇಶದಲ್ಲಿ ಘಟನೆ ವರದಿಯಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.
ತನ್ನ ತಂದೆಯೊಂದಿಗೆ ಇರಲು ಮಲತಾಯಿ ಅವಕಾಶ ನೀಡದ ಕಾರಣ ಯುವಕ ಬೇರೆ ಗ್ರಾಮದಲ್ಲಿ ವಾಸಿಸುತ್ತಿದ್ದ. ಭಾನುವಾರ ರಾತ್ರಿ ತಂದೆಯ ಮನೆಗೆ ಹೋದಾಗ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಪಗೊಂಡಿದ್ದ ಯುವಕ ಮಲತಾಯಿಗೆ ನಿಂದಿಸಿದ್ದಾನೆ. ಆದರೇ ತಂದೆ ಮಧ್ಯಪ್ರವೇಶಿಸಿ ತನ್ನ ಹೆಂಡತಿಯನ್ನ ಬೆಂಬಲಿಸಿದ್ದಕ್ಕೆ ಪರಿಸ್ಥಿತಿ ವಿಕೋಪಗೊಂಡು ಯುವಕ ತನ್ನ 60 ವರ್ಷದ ತಂದೆಯನ್ನ ಹೊಡೆದು ಕೊಂದಿದ್ದಾನೆ.
ನಂತರ ಯುವಕ ತನ್ನ ಮಲತಾಯಿಯ ಮೇಲೆ ಅತ್ಯಾಚಾರ ಎಸಗಿ ಮನೆಯಿಂದ ಪರಾರಿಯಾಗಿದ್ದಾನೆ. ಮಹಿಳೆ ದೂರು ನೀಡಿದ ನಂತರ ಸೋಮವಾರ ಆತನನ್ನ ಬಂಧಿಸಲಾಗಿದೆ ಎಂದು ಟೊಮ್ಕಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಎಸ್ಕೆ ಪತ್ರಾ ತಿಳಿಸಿದ್ದಾರೆ.
“ಕೊಲೆ ಮತ್ತು ಅತ್ಯಾಚಾರಕ್ಕೆ ಕಾರಣವಾದ ಕೋಪದ ನಿಖರವಾದ ಕಾರಣವನ್ನು ಕಂಡುಹಿಡಿಯಲು ನಾವು ಆರೋಪಿಯನ್ನ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದೇವೆ. ಮಲತಾಯಿ ತನ್ನ ತಂದೆಯೊಂದಿಗೆ ಇರಲು ಅವಕಾಶ ನೀಡಿರಲಿಲ್ಲ,” ಎಂದು ಪೊಲೀಸ್ ಅಧಿಕಾರಿ ಶ್ರೀ ಪಾತ್ರಾ ಹೇಳಿದ್ದಾರೆ.
Odisha: A young man who killed his father and raped his stepmother…