ಕೂಲಿ ಕೆಲಸಕ್ಕೆ ಕರೆದೊಯುತ್ತಿದ್ದ 22 ಮಕ್ಕಳನ್ನು ಮುಕ್ತಗೊಳಿಸಿದ ಅಧಿಕಾರಿಗಳು
1 min read
ಕೂಲಿ ಕೆಲಸಕ್ಕೆ ಕರೆದೊಯುತ್ತಿದ್ದ 22 ಮಕ್ಕಳನ್ನು ಮುಕ್ತಗೊಳಿಸಿದ ಅಧಿಕಾರಿಗಳು
ರಾಯಚೂರು: ರಾಜ್ಯದಲ್ಲಿ ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಯಲ್ಲಿದ್ದರು, ಇಂದು ಮಕ್ಕಳನ್ನು ಕೂಲಿ ಕಾರ್ಮಿಕ ಕೆಲಸಕ್ಕೆ ಗೂಡ್ಸ್ ಗಾಡಿಯಲ್ಲಿ ಕರೆದೊಯ್ಯುತ್ತದ್ದರು. ತಾಲೂಕಿನ ವಿವಿಧ ಕಡೆ ಮಕ್ಕಳ ರಕ್ಷಣಾ ಘಟಕ, ಆರ್ಟಿಓ ಸೇರಿ ಅಧಿಕಾರಿಗಳ ತಂಡ ದಾಳಿಮಾಡಿ 22 ಮಕಳನ್ನು ರಕ್ಷಿಸಿದ್ದಾರೆ.
ಅಧಿಕಾರಿಗಳು ರಾಯಚೂರು ತಾಲೂಕಿನ ವಿವಿಧೆಡೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಲಾಗಿದೆ. ಪ್ರಕರಣ ಸಂಬಂಧಿಸಿ ಕೂಲಿ ಕೆಲಸಕ್ಕೆ ಮಕ್ಕಳನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುತ್ತಿದ್ದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹತ್ತಿ ಬಿಡಿಸುವುದು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಮಕ್ಕಳನ್ನು ಜಮೀನುಗಳಿಗೆ ಕರೆದೊಯ್ಯಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ನಾಲ್ಕು ಗೂಡ್ಸ್ ವಾಹನಗಳನ್ನು ಜಪ್ತಿ ಮಾಡಿದರು.
ದಾಳಿ ನಡೆಸಿದ ತಂಡದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಜುನಾಥ ರೆಡ್ಡಿ, ಆರ್ ಟಿ ಓ ಕೃಷ್ಣ ಮೂರ್ತಿ, ಮಕ್ಕಳ ಸಹಾಯವಾಣಿ ಅಧಿಕಾರಿ ತಾಯಿ ರಾಜ್, ರವಿಕುಮಾರ್ ಸೇರಿ 5 ಅಧಿಕಾರಿಗಳು ಇದ್ದರು. ನಂತರ ರಕ್ಷಿಸಿದ ಮಕ್ಕಳನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಿದ್ದಾರೆ.