ಲಕ್ನೋ: ಬಕೆಟ್ ನಲ್ಲಿ ತನ್ನ ಮೂತ್ರ (Urine)ಸುರಿದು, ಅದರಿಂದ ಮನೆ ಕೆಲಸದಾಕೆ ಮನೆ ಒರೆಸಿರುವ ಘಟನೆಯೊಂದು ಉತ್ತರಪ್ರದೇಶದ ಗ್ರೇಟರ್ ನೊಯ್ಡಾದ ಅಜ್ನಾರ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ.
ಮಹಿಳೆ ಮೂತ್ರದಿಂದ ನೆಲ ಒಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣ (Viral Video) ಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಕುರಿತು ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೆಲಸದಾಕೆ ಸಬೀನಾ, ಆರಂಭದಲ್ಲಿ ಮಾಲೀಕರ ಆರೋಪಗಳನ್ನು ನಿರಾಕರಿಸಿದ್ದು ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ, ಈ ರೀತಿ ತಪ್ಪು ಮಾಡಿದ್ದಕ್ಕೆ ಕಾರಣವನ್ನು ಇನ್ನೂ ಬಾಯಿಬಿಟ್ಟಿಲ್ಲ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಸಬೀನಾ, ನೆಲ ಒರೆಸುವ ಸಂದರ್ಭದಲ್ಲಿ ಬಕೆಟ್ ನಲ್ಲಿ ನೀರಿಗೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ.