ರಸ್ತೆ ಮಧ್ಯೆಯೇ ಹೊತ್ತಿ ಉರಿದ ಆಯಿಲ್ ಟ್ಯಾಂಕರ್
ಹಾಸನ : ರಸ್ತೆ ಮಧ್ಯೆಯಲ್ಲೇ ಆಯಿಲ್ ಟ್ಯಾಂಕರ್ ಹೊತ್ತಿ ಉರಿದಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ನಡೆದಿದೆ.
ಮಂಗಳೂರಿನಿಂದ ಬೆಳಗಳೂರಿಗೆ ಆಯಿಲ್ ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ಟ್ಯಾಂಕರ್ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ಚಾಲಕ ಲಾರಿ ನಿಲ್ಲಿಸಿ, ಸ್ಥಳೀಯರ ನೆರವಿಂದ ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಬೆಂಕಿಯ ಕಬಂದ ಬಾಹುಗಳು ಲಾರಿಯನ್ನು ಆಕ್ರಮಿಸಿಬಿಟ್ಟಿದೆ.
ಇತ್ತ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮದಳ ಭೇಟಿ ನೀಡಿ ಬಿಂಕಿಯನ್ನು ನಂದಿಸಿದೆ.
ಇನ್ನು ಈ ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣೆ ನಿರ್ಮಾಣವಾಗಿತ್ತು. ಜೊತೆ ಟ್ರಾಫಿಕ್ ಜಾಮ್ ಉಂಟಾಗಿ ಜನರು ಕಿರಿಕಿರಿ ಅನುಭವಿಸುವಂತಾಗಿತ್ತು.









