ಒಮಾನ್ ಬೀಚ್ನಲ್ಲಿ ದೊಡ್ಡ ಅಲೆಗಳು ಅಪ್ಪಳಿಸಿದ ಪರಿಣಾಮ ಅಲೆಗಳ ಜೊತೆಗೆ ಮಹಾರಾಷ್ಟ್ರದ ವ್ಯಕ್ತಿ ಹಾಗೂ ಅವರ ಇಬ್ಬರು ಮಕ್ಕಳು ಕೊಚ್ಚಿಹೋಗಿದ್ದಾರೆ.. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ನೆಟ್ಟಿಗರನ್ನ ಬೆಚ್ಚಿ ಬೀಳಿಸಿದೆ..
ಈ ಘಟನೆಯಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೂಲದ 42 ವರ್ಷದ ವ್ಯಕ್ತಿ ಮತ್ತು ಅವರ ಇಬ್ಬರು ಮಕ್ಕಳು ಓಮನ್ನ ಸಲಾಹ್ ಅಲ್-ಮುಗ್ಸೈಲ್ ಕರಾವಳಿಯಲ್ಲಿ ಸಮುದ್ರದ ಅಲೆಗಳಿಗೆ ಕೊಚ್ಚಿಹೋಗಿದ್ದಾರೆ.
ಸಲಾಲಾ ಅಲ್ ಮುಗ್ಸೈಲ್ ಬೀಚ್ನಲ್ಲಿ ಹಲವಾರು ಪ್ರವಾಸಿಗರು ಆಟವಾಡ್ತಿದ್ದಾರೆ.. ಈ ವೇಳೆ ಬೃಹದ್ ಅಲೆ ಅಪ್ಪಳಿಸಿ ಕಡಲತೀರದಲ್ಲಿ ಆಟವಾಡುತ್ತಿದ್ದ ಶ್ರೇಯಾ (9) ಮತ್ತು ಶ್ರೇಯಸ್ (6) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.. ಅವರನ್ನ ರಕ್ಷಿಸಲು ಹೋದ ಶಶಿಕಾಂತ್ ಮ್ಮಾನೆ ಸಹ ಕೊಚ್ಚಿಹೋಗಿದ್ದಾರೆ.. ಕೆಲವರು ಅವರನ್ನು ರಕ್ಷಿಸಲು ಧಾವಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಶಶಿಕಾಂತ್ ಮ್ಮಾನೆ ಮತ್ತು ಅವರ ಮಗ ಶ್ರೇಯಸ್ ನೀರಿನಲ್ಲಿ ಮುಳುಗಿದ್ದು, ಅವರ ಮಗಳು ಶ್ರೇಯಾ ನಾಪತ್ತೆಯಾಗಿದ್ದಾರೆ ಎಂದು ಮ್ಮಾನೆ ಅವರ ಸಹೋದರ ಪಿಟಿಐಗೆ ತಿಳಿಸಿದ್ದಾರೆ. ದುಬೈನಲ್ಲಿ ನೆಲೆಸಿದ್ದ ಶಶಿಕಾಂತ್ ಮ್ಮಾನೆ, ಅವರ ಪತ್ನಿ ಮತ್ತು ಅವರ ಮಕ್ಕಳು ಭಾನುವಾರದಂದು ನೆರೆಯ ಓಮನ್ ಗೆ ಒಂದು ದಿನದ ಪ್ರವಾಸಕ್ಕೆ ಭೇಟಿ ನೀಡಿದ್ದರು.
Its better to err on the side of daring than the side of caution ……
A little caution is better than a great regret
Please be cautious especially now, in view of severe rainfall alert pic.twitter.com/Lo6ga6o0t4— Shikha Goel, IPS (@Shikhagoel_IPS) July 12, 2022