ಮತ್ತೆ ದೇಶದಲ್ಲಿ ಮಹಾಮಾರಿ ಸ್ಪೋಟವಾಗುವ ಲಕ್ಷಣ ಕಾಣ್ತಿದೆ.. ಈಗಾಗಲೇ 3ನೇ ಅಲೆ ಶುರುವಾಗಿರುಂವಂತಿದೆ.. ಇಡೀ ವಿಶ್ವಾದ್ಯಂತ ಒಮಿಕ್ರಾನ್ ಆತಂಕ ಸೃಷ್ಟಿ ಮಾಡಿದೆ.. ದೇಶದಲ್ಲೂ ದಿನೇ ದಿನೇ ಒಮಿಕ್ರಾನ್ ಸಂಖ್ಯೆ ಹೆಚ್ಚಾಗ್ತಿದೆ.. ಇದರ ನಡುವೆ ಈಗ ಸುಮಾರು ದಿನಗಳಿಂದ 8 ಸಾವಿರದ ಳಗೆ ದಾಖಲಾಗ್ತಿದ್ದ ದೈನಂದಿನ ಕೇಸ್ ಗಳು ನಿನ್ನೆಯಿಂದ ಮತ್ತೆ ಹೆಚ್ಚಾಗತೊಡಗಿದೆ.. ಕಳೆದ 24 ಗಂಟೆಗಳಲ್ಲಿ 13,154 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.. ದೇಶದಲ್ಲಿ ಒಟ್ಟು ಸೋಂಕಿಗೆ ತುತ್ತಾದವರ ಸಂಖ್ಯೆ 3,48,22,040 ಕ್ಕೆ ತಲುಪಿದೆ.
ನಿನ್ನೆ 268 ಮಂದಿ ಮಹಾಮಾರಿಯಿಂದ ಉಸಿರು ನಿಲ್ಲಿಸಿದ್ದಾರೆ.. ಒಟ್ಟು ಸಾವಿನ ಸಂಖ್ಯೆ 4,80,860 ಕ್ಕೆ ತಲುಪಿದೆ. ದೇಶದಲ್ಲಿ ಈ ವರೆಗೆ 3,42,51,292 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 82,402 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ.
ಒಮಿಕ್ರಾನ್ ಸೋಂಕಿತರ ಸಂಖ್ಯೆ 961ಕ್ಕೇರಿದೆ.. ಭಾರತದಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ಒಮಿಕ್ರಾನ್ ಪ್ರಕರಣಗಳು ದುಪ್ಪಟ್ಟಾಗ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.. ಇದೇ ಅವಧಿಯಲ್ಲಿ 320 ಮಂದಿ ಒಮಿಕ್ರಾನ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ..