`ಒಮಿಕ್ರಾನ್ ಫಸ್ಟ್’ ಫೋಟೋ ರಿಲೀಸ್ ಮಾಡಿದ ರೋಮ್ ಆಸ್ಪಿಟಲ್ Omicron saaksha tv
ಇನ್ನೇನು ಕಲವೇ ದಿನಗಳಲ್ಲಿ ಕೊರೊನಾ ಸೋಂಕು ಮಯಾವಾಗಲಿದೆ ಎನ್ನುಷ್ಟರಲ್ಲಿ ಹೊಸ ಅವತಾರದಲ್ಲಿ ಹೆಮ್ಮಾರಿ ಜನರ ಮುಂದೆ ಬಂದಿದೆ.
ದಕ್ಷಿಣ ಆಫ್ರಿಕಾದಲ್ಲಿ ಹೊಸದಾಗಿ ಕಾಣಿಸಿಕೊಂಡ ಕರೋನಾದ ಹೊಸ ರೂಪಾಂತರ ಓಮಿಕ್ರಾನ್ ಇಡೀ ಜಗತ್ತನ್ನು ನಡುಗಿಸುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಇದನ್ನು ವೆರಿಯಂಟ್ ಆಫ್ ಕನ್ಸರ್ಸ್ ಎಂದು ಪ್ರಕಟಿಸಿದೆ. ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ ಎಂಬ ಸುದ್ದಿ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಇತ್ತೀಚೆಗೆ ರೋಮ್‍ನ ಪ್ರತಿಷ್ಠಿತ ಬೊಂಬಿನೊ ಗೆಸೊ ಮಕ್ಕಳ ಆಸ್ಪತ್ರೆ ಒಮಿಕ್ರಾನ್‍ನ ಮೊದಲ ಫೋಟೋವನ್ನು ಬಿಡುಗಡೆ ಮಾಡಿದೆ. ಈ ಚಿತ್ರವು ನಕ್ಷೆಯಂತೆ ಕಾಣುತ್ತಿದೆ.
ಡೆಲ್ಟಾ ವೇರಿಯಂಟ್‍ಗೆ ಹೋಲಿಸಿದರೆ ಓಮಿಕ್ರಾನ್‍ನಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುತ್ತಿದೆ. ಓಮಿಕ್ರಾನ್ ರೂಪಾಂತರಗಳು ಇನ್ನೂ ಹೆಚ್ಚು ಅಪಾಯಕಾರಿ ಎಂದು ರೋಮ್ ಸಂಶೋಧಕರು ಹೇಳಿದ್ದಾರೆ.









