ಒಂದು ಸಾವಿರದ ಗಡಿ ದಾಟಿದ ಒಮಿಕ್ರಾನ್ ಸೋಂಕು….
ಶುಕ್ರವಾರದಂದು ದೇಶದಲ್ಲಿ ಓಮಿಕ್ರಾನ್ ರೋಗಿಗಳ ಸಂಖ್ಯೆ 1,000 ಗಡಿ ದಾಟಿದೆ. ಕೇವಲ 29 ದಿನಗಳಲ್ಲಿ, 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ರೋಗಿಗಳ ಒಟ್ಟು ಸಂಖ್ಯೆ 1315 ಕ್ಕೆ ತಲುಪಿದೆ.
ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರದ ಪ್ರಕರಣಗಳು 450 ಕ್ಕೆ ಏರಿಕೆಯಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಗುರುವಾರ ಒಂದೇ ದಿನದಲ್ಲಿ ದಾಖಲೆಯ 198 ರೋಗಿಗಳು ಪತ್ತೆಯಾಗಿದ್ದಾರೆ. Omicron ನಿಂದ ಮೊದಲ ಸಾವು ಮಹಾರಾಷ್ಟ್ರದಲ್ಲಿಯೇ ದಾಖಲಾಗಿದೆ.
ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ನಿಂದ ದೇಶದಲ್ಲಿ ಮೊದಲ ಸಾವು ದಾಖಲಾಗಿದೆ. 52 ವರ್ಷದ ಓಮಿಕ್ರಾನ್ ಸೋಂಕಿತ ವ್ಯಕ್ತಿ ಹೃದಯಾಘಾತದಿಂದ ಡಿಸೆಂಬರ್ 28 ರಂದು ಸಾವನ್ನಪ್ಪಿದ್ದಾನೆ.ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ನೈಜೀರಿಯಾದಿಂದ ಮರಳಿದ ವ್ಯಕ್ತಿ ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಶನ್ನ ಯಶವಂತ್ ಚವಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಮಹಾರಾಷ್ಟ್ರ ರಾಜ್ಯ ಸರ್ಕಾರ ಇದನ್ನು ಕೋವಿಡ್ ಅಲ್ಲದ ಕಾರಣಗಳಿಂದ ಸಾವು ಎಂದು ಪರಿಗಣಿಸಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್ನ ಇಂದಿನ ವರದಿಯಲ್ಲಿ ಅವರು ಓಮಿಕ್ರಾನ್ ಸೋಂಕಿತರಾಗಿದ್ದಾರೆಂದು ತೋರಿಸಿರುವುದು ಕಾಕತಾಳೀಯ ಎಂದು ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿದೆ.