ಒನ್ ಅಂಡ್ ಓನ್ಲಿ ಕುಮಾರಣ್ಣನೇ ನಮ್ಮ ನಾಯಕ : ಬಂಡೆಪ್ಪ ಕಾಶೆಂಪೂರ
ಬೆಂಗಳೂರು : ಆಡಳಿತ ಪಕ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ ಸಿಎಂ ಯಾರಾಗಬೇಕು ಎಂದು ಕಿತ್ತಾಟ ನಡೆಯುತ್ತಿದೆ.
ಆದರೆ ನಲ್ಲಿ ಆ ರೀತಿ ಇಲ್ಲ. ಒನ್ ಅಂಡ್ ಓನ್ಲಿ ಕುಮಾರಣ್ಣನೇ ನಮ್ಮ ನಾಯಕ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.
ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ನಾಯಕತ್ವದ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ.
ಆಡಳಿತ ಪಕ್ಷದಲ್ಲಿ ಸಿಎಂ ಬದಲಾಯಿಸಿ ಬೇರೆಯವರನ್ನು ಸಿಎಂ ಮಾಡುವ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್‍ನಲ್ಲಿ ಈಗಲೇ ಸಿಎಂ ಯಾರಾಗಬೇಕು ಎಂದು ಕಿತ್ತಾಟ ನಡೆಯುತ್ತಿದೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ, ಒನ್ ಅಂಡ್ ಓನ್ಲಿ ಕುಮಾರಣ್ಣನೇ ನಮ್ಮ ನಾಯಕ ಎಂದು ಹೇಳಿದರು.
ಮುಂದುವರೆದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್‍ನಲ್ಲಿ ನಾನು ಸಿಎಂ ಎಂದು ಅವರೇ ಹೇಳಿಕೊಳ್ಳುತ್ತಿದ್ದಾರೆ. ಅವರೇ ಹೇಗೆ ಸಿಎಂ ಆಗ್ತಾರೆ?
ಜನ ಮೊದಲು ಓಟ್ ಹಾಕಬೇಕು. ಬಿಜೆಪಿ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಯಾರು ಜನಪರ ಕಾಳಜಿ ಹೊಂದಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ.
ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‍ನವರು ಬಿಜೆಪಿಗೆ ಸಪೋರ್ಟ್ ಮಾಡ್ತಾರೆ ಎಂದು ಆರೋಪಿಸುತ್ತಾರೆ. ನಾವ್ಯಾಕೆ ಬಿಜೆಪಿಗೆ ಸಪೋರ್ಟ್ ಮಾಡೋಣ.
ಅಲ್ಪಸಂಖ್ಯಾತರನ್ನು ವಿಧಾನಸೌಧಕ್ಕೆ ಕಳುಹಿಸಬೇಕೆಂದು ಟಿಕೆಟ್ ಕೊಟ್ಟಿರುವುದು. ಕಾಂಗ್ರೆಸ್ ನವರು ಎಷ್ಟು ಮಂದಿ ಅಲ್ಪಸಂಖ್ಯಾತರನ್ನು ಬೆಳೆಸಿದ್ದಾರೆ.
ಕಾಂಗ್ರೆಸ್‍ನಲ್ಲಿರುವ ಬಹುತೇಕ ಅಲ್ಪಸಂಖ್ಯಾತ ಮುಖಂಡರು ದೇವೇಗೌಡರ ಗರಡಿಯಲ್ಲಿ ಬೆಳೆದವರು. ದೇವೇಗೌಡರು ತಯಾರಿಸಿದ ನಾಯಕರನ್ನು ಕಾಂಗ್ರೆಸ್ ಎಳೆದುಕೊಂಡಿದ್ದಾರಷ್ಟೇ ಎಂದರು.