ವಾಷಿಂಗ್ಟನ್: ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿಯೇ ವಿಮಾನದ ಡೋರ್ ಓಪನ್ ಆಗಿ ಆತಂಕ ಸೃಷ್ಟಿಸಿದ್ದ ಘಟನೆಯೊಂದು ನಡೆದಿದೆ.
ಈ ಘಟನೆ ಪೋರ್ಟ್ ಲ್ಯಾಂಡ್ ನಲ್ಲಿ ನಡೆದಿದೆ. ವಿಮಾನವೊಂದು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದರ ಬಾಗಿಲು ತೆರೆದುಕೊಂಡಿದೆ. ಅಲಾಸ್ಕಾ ಏರ್ ಲೈನ್ಸ್ ನ (Alaska Airlines) ಬೋಯಿಂಗ್ 737-9 ಮ್ಯಾಕ್ಸ್ ವಿಮಾನ ಟೇಕ್ ಆಫ್ ಆದ ಕೆಲವೇ ಗಂಟೆಗಳಲ್ಲಿ ಬಾಗಿಲು ತೆರೆದುಕೊಂಡಿದೆ. ಇದರಿಂದಾಗಿ ಕೆಲವು ಹೊತ್ತು ವಿಮಾನದಲ್ಲಿದ್ದವರಿಗೆ ಆತಂಕ ಎದುರಾಗಿದೆ.
ಕೂಡಲೇ ಪೋರ್ಟ್‌ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನವನ್ನು ತುರ್ತು ಭೂಸ್ಪರ್ಶ (Emergency Landing) ಮಾಡಲಾಯಿತು. ಈ ವಿಮಾನ ಒರೆಗಾನ್‍ನ ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯಾದ (California) ಒಂಟಾರಿಯೊಗೆ ಹಾರಾಟ ನಡೆಸುತ್ತಿತ್ತು. ಈ ವಿಮಾನದಲ್ಲಿ 171 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ಇದ್ದರು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ.
🚨#BREAKING: Alaska Airlines Forced to Make an Emergency Landing After Large Aircraft Window Blows Out Mid-Air ⁰⁰📌#Portland | #Oregon
⁰A Forced emergency landing was made of Alaska Airlines Flight 1282 at Portland International Airport on Friday night. The flight, traveling… pic.twitter.com/nt0FwmPALE— R A W S A L E R T S (@rawsalerts) January 6, 2024
ಈ ಕುರಿತು ತನಿಖೆ ನಡೆಸುವುದಾಗಿ ಅಲಾಸ್ಕ್ ಏರ್ ಲೈನ್ಸ್ ಹೇಳಿದೆ. ಘಟನೆ ನಡೆದ ಸಂದರ್ಭದಲ್ಲಿ ವಿಮಾನವು ಭೂಮಿಯಿಂದ ದೂರಕ್ಕೆ ಅಂದರೆ, ಸುಮಾರು 16,325 ಅಡಿ ಎತ್ತರದಲ್ಲಿ ಹಾರಾಟ ನಡೆಸಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಜಪಾನ್ನ ಟೋಕಿಯೊ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಚಲಿಸುತ್ತಿದ್ದ ವಿಮಾನ, ನಿಲ್ದಾಣದಲ್ಲಿ ನಿಂತಿದ್ದ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಐವರು ಸಿಬ್ಬಂದಿ ಸಾವನ್ನಪ್ಪಿದ್ದರು. ಆ ವಿಮಾನದಲ್ಲಿ 300ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.








