ನವದೆಹಲಿ: ತಮಿಳುನಾಡಿಗೆ ಮುಂದಿನ 23 ದಿನಗಳ ಕಾಲ ಪ್ರತಿ ದಿನ 2,600 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ನೀಡಿದೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎಸ್ಕೆ ಹಲ್ದಾರ್ ನಿರ್ದೇಶ ನೀಡಿದ್ದಾರೆ. ಅ. 30ರಂದು ನಡೆದಿದ್ದ ಸಭೆಯಲ್ಲಿ ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ, ನವೆಂಬರ್ 1 ರಿಂದ 23 ದಿನಗಳ ಕಾಲ ನಿತ್ಯ 2,600 ಕ್ಯೂಸೆಕ್ ನೀರು ಹರಿಸಲು ನಿರ್ದೇಶನ ಮಾಡಿದ್ದರು. ಈಗ ಈ ಆದೇಶವನ್ನು ಕಾವೇರಿ ನೀರು (Cauvery Water) ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿದೆ.