ಆಸ್ಕರ್ ಪ್ರಶಸ್ತಿ ವಿಜೇತ ನಟ ಕಾರಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಪ್ಯಾರಾಸೈಟ್ ಸಿನಿಮಾದಲ್ಲಿ ನಟಿಸಿ ಹೆಚ್ಚು ಹೆಸರು ಮಾಡಿದ್ದ ಹಾಲಿವುಡ್ ನಟ ಲೀ ಸನ್ ಕ್ಯುನ್ (Lee Sun-kyun) ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕೊರಿಯಾದ (South Korea) ಸೆಂಟ್ರಿಲ್ ಸಿಯೋಲ್ ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.
ಲೀ ಸನ್ ಕ್ಯೂನ್ ಆತ್ಮಹತ್ಯೆ (suicide)ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ಮಾಡಲಾಗಿತ್ತು. ವಿಚಾರಣೆಗೆ ಒಳಗಾದ ಮಾರನೇ ದಿನವೇ ಅವರು ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 48ರ ವಯಸ್ಸಿನ ಸಾವಿಗೆ ಇಡೀ ದಕ್ಷಿಣ ಕೊರಿಯಾ ಆಘಾತ ವ್ಯಕ್ತಪಡಿಸುತ್ತಿದೆ.