ಓಟಿಟಿ | ಐದು ಸಿನಿಮಾ.. ವೆಬ್ ಸಿರೀಸ್ ರಿಲೀಸ್
ಬೆಂಗಳೂರು : ಕೊರೊನಾದಿಂದಾಗಿ ಓಟಿಟಿಗೆ ಹೊಂದಿಕೊಂಡಿರುವ ಸಿನಿಮಾ ಪ್ರಿಯರಿಗೆ ಈ ವೀಕೆಂಡ್ ತುಸು ಹೆಚ್ಚು ಖುಷಿ ನೀಡಲಿದೆ.
ಕಾರಣ ಈ ವೀಕೆಂಡ್ ನಲ್ಲಿ ಬರೋಬ್ಬರಿ ಐದು ಸಿನಿಮಾಗಳು ಹಾಗೂ ವೆಬ್ ಸಿರೀಸ್ ಗಳು ರಿಲೀಸ್ ಆಗಿವೆ.
ತೆಲುಗು ಭಾಷೆಯ ಅವಂತಿ ಸಿತ್ರಾಲು ಸಿನಿಮಾ ಇಂದು ಝೀ 5 ಅಪ್ಲಿಕೇಶನ್ ನಲ್ಲಿ ಬಿಡುಗಡೆಯಾಗಿದೆ.
ಸಿನಿಮಾ ಸಂಗೀತಗಾರ, ವೇಶ್ಯೆ, ಬಾಕ್ಸರ್ ಹಾಗೂ ಸಾಮಾನ್ಯರಂತೆ ಜೀವನ ನಡೆಸಲು ಪ್ರಯತ್ನಿಸುವ ದರೋಡೆಕೋರನ ಸುತ್ತ ಸುತ್ತುತ್ತದೆ. ಇದು ಝೀ 5ನಲ್ಲಿ ರಿಲೀಸ್ ಆಗಿದೆ.
ನೆಟ್ ಫ್ಲಿಕ್ಸ್ ನಲ್ಲಿ ಇಂಡಿಯಾದ ಮೊದಲ ಕಪ್ಪು ಮತ್ತು ಬಿಳಿ ವೆಬ್ ಸರಣಿಯಾದ ಕೋಟಾ ಫ್ಯಾಕ್ಟರಿ ಸೀರಿಸ್ ನ ಸೀಸನ್ 2 ಬಿಡುಗಡೆಯಾಗಿದೆ. ಇದು 16 ವರ್ಷದ ಬಾಲಕ ವೈಭವ್ ಜೀವನದ ಬಗ್ಗೆ ಕಥೆಯನ್ನು ಹೊಂದಿದೆ.
ಇದಲ್ಲದೆ ಹಾಲಿವುಡ್ ಸಿನಿಮಾ ದಿ ಸ್ಟಾರ್ಲಿನ್ ನೆಟ್ ಫ್ಲಿಕ್ಸ್ ನಲ್ಲಿ ಇಂದು ಬಿಡುಗಡೆಯಾಗಿದೆ.
ಅಮೆಜಾನ್ ಪ್ರೈಮ್ ವೀಡಿಯೊದ ಪಾಪ್ಯುಲರ್ ಶೋಗೋಲಿಯಾತ್ ನ 4ನೇ ಸೀಸನ್ ಇಂದು ರಿಲೀಸ್ ಆಗಿದೆ.
ಮಿಡ್ ನೈಟ್ ಮಾಸ್ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಹಾರರ್ ಕಥಾಹಂದರ ಹೊಂದಿದೆ.