ಆಕ್ಸಿಜನ್ ಕೊರತೆಗೆ ಸರ್ಕಾರ ಕಾರಣ ಅಲ್ಲ : ಎಸ್.ಟಿ.ಸೋಮಶೇಖರ್
ಬೆಂಗಳೂರು : ಒಂದು ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿದ್ದರೇ ಇದಕ್ಕೆ ಸ್ಪಂದಿಸಿ ಸೂಕ್ತ ವ್ಯವಸ್ಥೆ ಮಾಡಬೇಕಾದ ರಾಜ್ಯ ಸರ್ಕಾರದ ಘನತೆಹೊತ್ತ ಸಚಿವರು ಉಡಾಫೆ ಉತ್ತರ ಕೊಡುತ್ತಾ ಓಡಾಡುತ್ತಿದ್ದಾರೆ.
ಇಂದು ಆರೋಗ್ಯ ಸಚಿವ ಸುಧಾಕರ್ ಅವರನ್ನ ಭೇಟಿಯಾದ ನಂತರ ಎಸ್.ಟಿ.ಸೋಮಶೇಖರ್ ಮಾಧ್ಯಮಗಳ ಜೊತೆ ಮಾತನಾಡಿ, ಎಲ್ಲರಂತೆ ಸರ್ಕಾರವನ್ನು ಸಮರ್ಥಿಸಿಕೊಂಡರು.
ಆಕ್ಸಿಜನ್ ಕೊರತೆಗೆ ಸರ್ಕಾರ ಕಾರಣ ಅಲ್ಲ ಎಂದು ಉಡಾಫೆ ಉತ್ತರ ಕೊಟ್ಟ ಎಸ್.ಟಿ.ಸೋಮಶೇಖರ್, ಈ ಬಗ್ಗೆ ಸಂಜೆ ಸಭೆ ಬಳಿಕ ಅಲ್ಲಿ ಚರ್ಚೆ ಮಾಡುತ್ತೇವೆ.
ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳು ಇರ್ತಾರೆ. ಅವರು ಕೆಲಸ ಮಾಡದೇ ಹೋದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು. ಅಧಿಕಾರಿಗಳ ನಿರ್ಲಕ್ಷ್ಯ ಇದರಲ್ಲಿದೆ ಎಂದು ಹೇಳಿ ಜಾರಿಕೊಂಡರು.
ಇದಿಷ್ಟೇ ಅಲ್ಲದೇ ಎರಡು ಗಂಟೆಗೆ ಆಕ್ಸಿಜನ್ ಖಾಲಿ ಆಗುತ್ತೆ ಗೊತ್ತಿದ್ರೆ, 12 ಗಂಟೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದು ಹೇಳಿ ಕಾರ್ ಹೋದರು.