Padma Awards-2023 – ಸೆಪ್ಟೆಂಬರ್ 15 ರವರೆಗೆ ನಾಮನಿರ್ದೇಶನ ಮಾಡುವುದಕ್ಕೆ ಅವಕಾಶ…..
ಪದ್ಮ ಪ್ರಶಸ್ತಿ-2023 ನಾಮನಿರ್ದೇಶನಗಳು ಈ ವರ್ಷದ ಸೆಪ್ಟೆಂಬರ್ 15 ರವರೆಗೆ ತೆರೆದಿರುತ್ತವೆ ಎಂದು ಗೃಹ ಸಚಿವಾಲಯ ತಿಳಿಸಿಸಿದೆ. ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ, ಇವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಸೇರಿವೆ. ಪದ್ಮ ಪ್ರಶಸ್ತಿ-2023 ಕ್ಕಾಗಿ ಗ ಆನ್ಲೈನ್ ನಾಮನಿರ್ದೇಶನಗಳು(nominations) ಮತ್ತು ಶಿಫಾರಸುಗಳನ್ನು ಮೇ 1 ರಂದು ತೆರೆಯಲಾಗಿದೆ, ಇದನ್ನು ಮುಂದಿನ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಈ ಪ್ರಶಸ್ತಿಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಅವಿರತವಾಗಿ ದುಡಿದ ಗಣ್ಯರನ್ನ ಗುರುತಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆಗಳ ಎಲ್ಲಾ ಕ್ಷೇತ್ರಗಳಲ್ಲಿನ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು ಮತ್ತು ಸೇವೆಗಾಗಿ ನೀಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ಪೀಪಲ್ಸ್ ಪದ್ಮವನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ.
Nominations for Padma Awards-2023 to remain open till September 15