ಪಾಕಿಸ್ತಾನ ಸರ್ಕಾರದ ಟ್ವೀಟರ್ ಖಾತೆಗಳು ಭಾರತದಲ್ಲಿ ನಿಷೇಧ…
ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಗಳನ್ನ ಶನಿವಾರದಿಂದ ಭಾರತದಲ್ಲಿ ತಡೆಹಿಡಿಯಲಾಗಿದೆ.
PFI ಮೇಲಿನ ಐದು ವರ್ಷಗಳ ನಿಷೇಧವನ್ನು ವಿರೋಧಿಸಿ ಪಾಕಿಸ್ತಾನಿ ರಾಯಭಾರ ಕಚೇರಿ ಟ್ವೀಟ್ ಮಾಡಿತ್ತು. ಕೆನಡಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಈ ಕ್ರಮವನ್ನು ಭಾರತ ಸರ್ಕಾರ ವಿರೋಧಿಸಿತ್ತು. ಆದ್ದರಿಂದ PFI ಬೆಂಬಲಿಸಿದ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ನಂಬಲಾಗಿದೆ.
ಕೇಂದ್ರದ ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣ ಕಂಪನಿ ಟ್ವೀಟರ್ ಹೇಳಿಕೆ ನೀಡಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ ಬೆಂಬಲಿಸಿ ಕೆನಡಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಟ್ವೀಟ್ ನ ಸ್ಕ್ರೀನ್ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವರದಿಗಳ ಪ್ರಕಾರ, ಪಾಕಿಸ್ತಾನದ ಕಾನ್ಸುಲೇಟ್ ಜನರಲ್ ವ್ಯಾಂಕೋವರ್ ನ ಅಧಿಕೃತ ಹ್ಯಾಂಡಲ್ ನಿಂದ ನಿಷೇಧಿತ PFI ಅನ್ನು ಬೆಂಬಲಿಸಿ ಟ್ವೀಟ್ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಆಕ್ಷೇಪಾರ್ಹ ಟ್ವೀಟ್ ಜೊತೆಗೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪಾಕಿಸ್ತಾನ ಸರ್ಕಾರವನ್ನೂ ಅದರಲ್ಲಿ ಟ್ಯಾಗ್ ಮಾಡಲಾಗಿತ್ತು. ಈ ಟ್ವೀಟ್ ವಿರುದ್ಧ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Pak Twitter: The Twitter account of the Pakistan Government was withheld in India on Saturday