Pakistan-ಪಾಕಿಸ್ತಾನದ ಸಾರ್ವಜನಿಕ ಆಸ್ಪತ್ರೆಯೊಂದರ (Hospital) ಮೇಲ್ಛಾವಣಿಯಲ್ಲಿ 200 ಕೊಳೆತ ಮೃತದೇಹಗಳು ಪತ್ತೆಯಾಗಿರುವ ಭಯಾನಕ ಘಟನೆ ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದಲ್ಲಿ ವರದಿಯಾಗಿದೆ.
ಪಾಕಿಸ್ತಾನದ ಪಂಜಾಬ್‌ನ ಮುಖ್ಯಮಂತ್ರಿ ಯಾದ ಚೌಧರಿ ಜಮಾನ್ ಗುಜ್ಜರ್ (Chaudhry Zaman Gujjar) ಅವರು ನಿಶ್ತಾರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಓರ್ವ ವ್ಯಕ್ತಿಯು, ನೀವು ಏನಾದರೂ ಒಳ್ಳೆಯ ಕಾರ್ಯ ಮಾಡಲು ಬಯಸಿದ್ದರೇ ಶವಾಗಾರಕ್ಕೆ ಹೋಗಿ ಪರೀಕ್ಷಿಸಿ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಶವಗಾರಕ್ಕೆ ಹೋಗಿದ್ದ ಮುಖ್ಯಮಂತ್ರಿ, ಸಿಬ್ಬಂದಿ ಬಳಿ ಬಾಗಿಲು ತೆಗೆಯಲು ಹೇಳಿದಾಗ ಆತ ಬಾಗಿಲು ತೆರೆಯಲು ನಿರಾಕರಿಸಿದ. ಸಿಎಂ ಬಾಗಿಲು ತೆರೆಯದಿದ್ದರೇ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಸಿದ್ದರು.
ನಂತರ ಬಾಗಿಲನ್ನು ತೆರೆದಾಗ ಅಲ್ಲಿ ಸುಮಾರು 200 ಕೊಳೆತ ಶವ ಪತ್ತೆ ಆಗಿದ್ದವು. ಇದನ್ನ ನೋಡಿ ಹೌಹಾರಿದ ಪಂಜಾಬ್ ಮುಖ್ಯಮಂತ್ರಿಗಳು ಘಟನೆಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದ್ದಾರೆ.
ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೂರಾರು ಶವಗಳನ್ನು ಕೆಟ್ಟ ಸ್ಥಿತಿಯಲ್ಲಿ ಛಾವಣಿಯ ಮೇಲೆ ಎಸೆದಿರುವುದು ಕಾಣಬಹುದಾಗಿದೆ. ಶವಗಳನ್ನು ರಣಹದ್ದುಗಳಿಗೆ ಬಳಸಲು ಛಾವಣಿ ಮೇಲೆ ಇಡಲಾಗಿದೆ ಎಂಬ ವದಂತಿ ಹಬ್ಬಿದೆ.