ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು ಎಂದು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ 24 ಸ್ಥಾನಗಳನ್ನು ಮೀಸಲಿಡಲಾಗಿದೆ ಎಂದು ಲೋಕಸಭೆಯಲ್ಲಿ (Lok Sabha) ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ವಿಧೇಯಕವನ್ನು(Jammu and Kashmir Reorganisation Bill) ಮಂಡಿಸಿ ಹೇಳಿದ್ದಾರೆ.
ಭಯೋತ್ಪಾದನೆಯ ಹಾವಳಿಯಿಂದಾಗಿ ಜಮ್ಮು ಹಾಗೂ ಕಾಶ್ಮೀರ ತೊರೆಯಬೇಕಾದವರನ್ನು ಈ ಮಸೂದೆಗಳು ಬಲಪಡಿಸುತ್ತವೆ.ಭಯೋತ್ಪಾದಕ ಬೆದರಿಕೆಗಳಿಂದಾಗಿ ಈ ಪ್ರದೇಶದಲ್ಲಿ ಒಟ್ಟು 1,57,967 ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡು ದೇಶದ ಇನ್ನಿತರ ಭಾಗಗಳಲ್ಲಿ ನೆಲಸಿದ್ದಾರೆ. ಮೊದಲ ಯುದ್ಧದ ನಂತರ ಪಾಕ್ ಆಕ್ರಮಿತ ಕಾಶ್ಮೀರದಿಂದ 31,000 ಕ್ಕೂ ಹೆಚ್ಚು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದವು ಎಂದು ಹೇಳಿದ್ದಾರೆ.
ಪಿಒಕೆಗೆ ಸ್ಥಳಾಂತರಗೊಂಡವರಿಗೆ ಒಂದು ಅಸೆಂಬ್ಲಿ ಸ್ಥಾನವನ್ನು ಮತ್ತು ಕಾಶ್ಮೀರದಿಂದ ಹೊರಗೆ ನೆಲೆಸಿರುವವರಿಗೆ ಎರಡು ಸ್ಥಾನಗಳನ್ನು ಮೀಸಲಿಡಲಾಗಿದೆ. ಕಾಯ್ದಿರಿಸಿರುವ ಸ್ಥಾನಕ್ಕೆ ಪಿಒಕೆಯಿಂದ ಒಬ್ಬ ಪ್ರತಿನಿಧಿ ನಾಮನಿರ್ದೇಶನವಾಗಿ ಆಯ್ಕೆಯಾಗಲಿದ್ದಾರೆ. ವಿಧಾನಸಭೆಯಲ್ಲಿ ನಾಮನಿರ್ದೇಶಿತ ಸ್ಥಾನಗಳನ್ನು ಹಿಂದಿನ ಮೂರರಿಂದ ಐದಕ್ಕೆ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ. ಜಮ್ಮುವಿನ ವಿಧಾನಸಭಾ ಸ್ಥಾನಗಳು 37 ರಿಂದ 43ಕ್ಕೆ ಏರಿಕೆಯಾಗಿವೆ. ಕಾಶ್ಮೀರದಲ್ಲಿ ಕ್ಷೇತ್ರಗಳ ಸಂಖ್ಯೆ 46 ರಿಂದ 47 ಕ್ಕೆ ಏರಿಕೆಯಾಗಿದೆ.