ನಿಮ್ಮೊಂದಿಗೆ ನಾವಿದ್ದೇವೆ, ಶೀಘ್ರವಾಗಿ ಚೇತರಿಸಿಕೊಳ್ಳಿ – ಭಾರತಕ್ಕೆ ಆಸ್ಟ್ರೇಲಿಯಾ, ಪಾಕ್, ಫ್ರಾನ್ಸ್ ಸೇರಿದಂತೆ ವಿಶ್ವ ನಾಯಕರ ಹಾರೈಕೆ

2 min read
India battles covid19

ನಿಮ್ಮೊಂದಿಗೆ ನಾವಿದ್ದೇವೆ, ಶೀಘ್ರವಾಗಿ ಚೇತರಿಸಿಕೊಳ್ಳಿ – ಭಾರತಕ್ಕೆ ಆಸ್ಟ್ರೇಲಿಯಾ, ಪಾಕ್, ಫ್ರಾನ್ಸ್ ಸೇರಿದಂತೆ ವಿಶ್ವ ನಾಯಕರ ಹಾರೈಕೆ

ಕೋವಿಡ್-19 ಪ್ರಕರಣಗಳ ಏರಿಕೆ ಮತ್ತು ಆಮ್ಲಜನಕದ ಕೊರತೆಯ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಭಾರತಕ್ಕೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸೇರಿದಂತೆ ಹಲವಾರು ವಿಶ್ವ ನಾಯಕರು ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಜೊತೆಗೆ ಶೀಘ್ರವಾಗಿ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣಲಿ ಎಂದು ಹಾರೈಸಿದ್ದಾರೆ.
India battles covid19

ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಇಮ್ರಾನ್ ಖಾನ್ ಭಾರತದ ಜನರೊಂದಿಗೆ ನಾವಿದ್ದೇವೆ ಎಂದು ಒಗ್ಗಟ್ಟನ್ನು ವ್ಯಕ್ತಪಡಿಸಿದ್ದು, ಸಾಂಕ್ರಾಮಿಕ ರೋಗದಿಂದ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ್ದಾರೆ. ಎಲ್ಲರೂ ಒಟ್ಟಾಗಿ ಈ ಜಾಗತಿಕ ಸವಾಲನ್ನು ಎದುರಿಸಬೇಕು ಎಂದು ಹೇಳಿದ್ದಾರೆ.

#COVID-19 ಎರಡನೇ ‌ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತದಲ್ಲಿರುವ ನಮ್ಮ ಸ್ನೇಹಿತರೊಂದಿಗೆ ಆಸ್ಟ್ರೇಲಿಯಾ ನಿಂತಿದೆ. ಭಾರತ ರಾಷ್ಟ್ರ ಎಷ್ಟು ಪ್ರಬಲ ಮತ್ತು ಬೇಗ ಚೇತರಿಸಿಕೊಳ್ಳುತ್ತದೆ ಎಂಬುದು ನಮಗೆ ತಿಳಿದಿದೆ. ಈ ಜಾಗತಿಕ ಸವಾಲಿಗೆ ಪಿಎಂ ನರೇಂದ್ರ ಮೋದಿ ಮತ್ತು ನಾನು ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತೇನೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

“ಭಾರತದ ಜನರು # COVID19 ನ ಅಪಾಯಕಾರಿ ಅಲೆಯೊಂದಿಗೆ ಹೋರಾಡುವಾಗ ನಾವು ‌ನಿಮ್ಮೊಂದಿಗೆ ಇದ್ದೇವೆ ಎಂದು ಒಗ್ಗಟ್ಟನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ನಾವು ನಮ್ಮ ನೆರೆಹೊರೆ ಮತ್ತು ಜಗತ್ತಿನಲ್ಲಿ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಎಲ್ಲರಿಗೂ ಪ್ರಾರ್ಥನೆ ಮಾಡುತ್ತೇವೆ. ಈ ಜಾಗತಿಕ ಸವಾಲನ್ನು ನಾವು ಒಟ್ಟಾಗಿ ಎದುರಿಸಬೇಕು”‘ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನದ ಐಟಿ ಬಿಟಿ ಸಚಿವ ಫವಾದ್ ಹುಸೇನ್ ಕೂಡ ಕೋವಿಡ್ ಬಿಕ್ಕಟ್ಟಿನಿಂದ ಭಾರತ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಭಾರತದ ಜನರೊಂದಿಗೆ ಇವೆ ಎಂದು ಅವರು ಹೇಳಿದ್ದಾರೆ.
ಭೂತಾನ್ ವಿದೇಶಾಂಗ ವ್ಯವಹಾರಗಳ ಸಚಿವ ತಂದಿ ದ್ರೋರ್ಜಿ ಕೂಡ ಭಾರತ ಶೀಘ್ರ ಪರಿಹಾರ ಮತ್ತು ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿದ್ದಾರೆ. ಸಾಂಕ್ರಾಮಿಕ ರೋಗದ ಈ ಅತ್ಯಂತ ಕಠಿಣ ಅವಧಿಯಲ್ಲಿ ತ್ವರಿತ ಪರಿಹಾರ ಮತ್ತು ಚೇತರಿಕೆಗಾಗಿ ಭಾರತ ಸರ್ಕಾರ ಮತ್ತು ಭಾರತದ ಜನರಿಗಾಗಿ
ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಅವರು ಹೇಳಿದರು.

ಕೊರೋನವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ಫ್ರಾನ್ಸ್ ಸಿದ್ಧವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಎರಡನೇ ತರಂಗವು ದೇಶದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ವಿಶ್ವದಾದ್ಯಂತದ ನಾಯಕರು ಭಾರತಕ್ಕೆ ಬೆಂಬಲವನ್ನು ನೀಡಿದ್ದಾರೆ.

ಭಾರತವು 3,46,786 ಹೊಸ ಕೊರೋನವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,66,10,481 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ. ಸಾವಿನ ಸಂಖ್ಯೆ 1,89,544 ಕ್ಕೆ ಏರಿದ್ದು, ಒಂದು ದಿನದಲ್ಲಿ 2,624 ಕ್ಕೂ ಹೆಚ್ಚಿನ ಸಾವುನೋವುಗಳು ದಾಖಲಾಗಿವೆ.

ತೀವ್ರವಾದ ಪ್ರಕರಣಗಳ ಹೆಚ್ಚಳದೊಂದಿಗೆ, ದೇಶದಲ್ಲಿ ಸಕ್ರಿಯ ಪ್ರಕರಣಗಳು 25,52,940 ತಲುಪಿದೆ ಮತ್ತು ಒಟ್ಟು ಸೋಂಕು ಪ್ರಕರಣ ಶೇಕಡಾ 15.37 ರಷ್ಟಿದೆ. ಆದರೆ ರಾಷ್ಟ್ರೀಯ ಕೋವಿಡ್-19 ಚೇತರಿಕೆ ಪ್ರಮಾಣವು 83.49 ಕ್ಕೆ ಇಳಿದಿದೆ.
India battles covid19

2,624 ಹೊಸ ಸಾವುನೋವುಗಳಲ್ಲಿ ಮಹಾರಾಷ್ಟ್ರದಿಂದ 773, ದೆಹಲಿಯಿಂದ 348, ಛತ್ತೀಸ್‌ಗಢ ದಿಂದ 219, ಉತ್ತರ ಪ್ರದೇಶದಿಂದ 196, ಗುಜರಾತ್‌ನಿಂದ 142, ಕರ್ನಾಟಕದಿಂದ 190, ತಮಿಳುನಾಡಿನಿಂದ 78 ಮತ್ತು ಪಂಜಾಬ್‌ನಿಂದ 75 ಸೇರಿವೆ. ದೇಶದಲ್ಲಿ ಈವರೆಗೆ ಒಟ್ಟು 1,89,544 ಸಾವುಗಳು ಸಂಭವಿಸಿವೆ. ಇದರಲ್ಲಿ ಮಹಾರಾಷ್ಟ್ರದಿಂದ 63,252, ಕರ್ನಾಟಕದಿಂದ 14,075, ತಮಿಳುನಾಡಿನಿಂದ 13,395, ದೆಹಲಿಯಿಂದ 13,541, ಪಶ್ಚಿಮ ಬಂಗಾಳದಿಂದ 10,825, ಉತ್ತರ ಪ್ರದೇಶದಿಂದ 10,737, ಪಂಜಾಬ್‌ನಿಂದ 8,264 ಮತ್ತು ಆಂಧ್ರಪ್ರದೇಶದಲ್ಲಿ 7,579 ದಾಖಲಾಗಿದೆ.

#worldleader #Indiabattles #covid19

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd