ನಟ ಪ್ರಭಾಸ್‌ಗೆ (Prabhas) ‘ಕಲ್ಕಿ’ ಸಿನಿಮಾ ಸಾಕಷ್ಟು ಹೆಸರು ತಂದು ಕೊಟ್ಟಿದೆ. ಈ ಮಧ್ಯೆ ಈಗ ಡಾರ್ಲಿಂಗ್ ಪ್ರಭಾಸ್ ನಟನೆಯ ಹೊಸ ಸಿನಿಮಾಗೆ ಪಾಕಿಸ್ತಾನಿ ನಟಿಗೆ ಅವಕಾಶ ನೀಡಲಾಗಿದೆ.
ಪ್ರಭಾಸ್ ಜೊತೆ ಪಾಕಿಸ್ತಾನಿ ನಟಿ ಡ್ಯುಯೇಟ್ ಹಾಡಲಿದ್ದಾರೆ. ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ನಿಂದ ಹಳೆಯ ಸಿನಿಮಾಗಳ ಸೋಲಿನ ಕಹಿ ಮರೆತಂತಾಗಿದೆ. ಈಗ ಪ್ರಭಾಸ್ ‘ದಿ ರಾಜಾ ಸಾಬ್’ ಚಿತ್ರದ ಶೂಟಿಂಗ್ ನಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.
ನಾಯಕಿಯಾಗಿ ನಟಿಸಲು ಪಾಕಿಸ್ತಾನಿ ನಟಿ ಸಜಲ್ ಅಲಿಗೆ ಅವಕಾಶ ಸಿಕ್ಕಿದೆ. ಆದರೆ, ಚಿತ್ರ ತಂಡದ ಈ ನಿರ್ಧಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಾಯಕಿಯರಿಗೆ ಕೊರತೆ ಏನಿದೆ. ಪಾಕಿಸ್ತಾನಿ ನಟಿಗೆ ಅವಕಾಶ ಕೊಡುವ ಅಗತ್ಯ ಏನಿದೆ ಎಂದೆಲ್ಲಾ ಚಿತ್ರತಂಡಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಸಜಲ್ ಅಲಿನೇ ಈ ಚಿತ್ರದ ನಾಯಕಿ ಎಂದು ಅಧಿಕೃತ ಘೋಷಣೆ ಮಾಡಿಲ್ಲ ಚಿತ್ರತಂಡ. ಆದರೂ ಕೇವಲ ಸುದ್ದಿ ಕೇಳಿ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಜಲ್ ಅಲಿಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಬಾಲಿವುಡ್‌ನಲ್ಲಿ ಈ ಹಿಂದೆ ‘ಮಾಮ್’ ಎಂಬ ಸಿನಿಮಾದಲ್ಲಿ ನಟಿಸಿದ್ದರು








