ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ ಪಾಕಿಸ್ತಾನದ ಸಚಿವ
ಇಸ್ಲಾಮಾಬಾದ್, ಅಗಸ್ಟ್20: ಪಾಕಿಸ್ತಾನದ ವಿವಾದಾತ್ಮಕ ಫೆಡರಲ್ ಸಚಿವ ಶೇಖ್ ರಶೀದ್ ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. ಇಮ್ರಾನ್ ಖಾನ್ ಸರ್ಕಾರದ ಫೆಡರಲ್ ರೈಲ್ವೆ ಸಚಿವ ಶೇಖ್ ರಶೀದ್ ಅವರನ್ನು ಪಾಕಿಸ್ತಾನದ ಕುಖ್ಯಾತ ಕೌಂಟರ್ ಇಂಟೆಲಿಜೆನ್ಸ್ ಸಂಸ್ಥೆ – ಐಎಸ್ಐನ ಧ್ವನಿಯೆಂದೇ ಪರಿಗಣಿಸಲಾಗಿದೆ.
Sheikh Rasheed and his discoveries. This time he's found a scientist who made a precision kafir bomb for India. pic.twitter.com/uozTBHPLM2
— Naila Inayat (@nailainayat) August 20, 2020
ಟೆಲಿವಿಷನ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಶೇಖ್ ರಶೀದ್ ಅವರು ಸಾಂಪ್ರದಾಯಿಕ ಯುದ್ಧದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನ ಸೈನ್ಯಕ್ಕಿಂತ ದೊಡ್ಡದಿದೆ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳ ಮೂಲಕ ಭಾರತದ ಮೇಲೆ ಯುದ್ಧ ನಡೆಸುತ್ತದೆ ಎಂದು ಹೇಳಿದ್ದಾರೆ. ಅಸ್ಸಾಂ ವರೆಗೆ ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನವು ಬಹಳ ಚಿಕ್ಕದಾದ, ಅತ್ಯಂತ ನಿಖರವಾದ ಮತ್ತು ಪರಿಪೂರ್ಣವಾದ ಪರಮಾಣು ಬಾಂಬ್ಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಶೇಖ್ ರಶೀದ್ ಭಾರತಕ್ಕೆ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2019 ರಲ್ಲಿ, ಪಾಕಿಸ್ತಾನವು 125-250 ಗ್ರಾಂಗಳಷ್ಟು ಚಿಕ್ಕದಾದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಮತ್ತು ಅದು ನಿರ್ದಿಷ್ಟ ಪ್ರದೇಶವನ್ನು ಮಾತ್ರ ನಾಶಪಡಿಸುತ್ತದೆ ಎಂದು ಹೇಳಿದ್ದರು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು 2019 ರಲ್ಲಿ ಕಾಶ್ಮೀರ ವಿರುದ್ಧ ಮಿಲಿಟರಿ ಮುಖಾಮುಖಿಯಾಗುವುದಾಗಿ ಭಾರತಕ್ಕೆ ಬೆದರಿಕೆ ಹಾಕಿದ ನಂತರ ಶೇಖ್ ರಶೀದ್ ಅವರ ಈ ಹೇಳಿಕೆ ಬಂದಿತ್ತು.