ಪ್ರಧಾನಿ ಮೋದಿ ಕಾಶ್ಮೀರ ಭೇಟಿಗೆ ಟೀಕೆ ವ್ಯಕ್ತಪಡಿಸಿದ ಪಾಕ್ ಪ್ರಧಾನಿ
ನವದೆಹಲಿ: ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಮ್ಮು&ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಇದಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಝ್ ಷರೀಫ್ ವಿರೋಧಿಸಿ ಟ್ವೀಟ್ ಮಾಡಿದ್ದಾರೆ.
ಪಂಚಾಯತ್ ರಾಜ್ ದಿವಸ ಅಂಗವಾಗಿ ಜಮ್ಮು & ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ವಿವಿಧ ಜಲವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಧಾನಿ ಈ ಕಾಮಗಾರಿಗಳು ಸಿಂಧು ನದಿ ಒಪ್ಪಂದದ ಆಶಯಗಳನ್ನು ಉಲ್ಲಂಘಿಸಿದೆ, ಇದು ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿವೆ, ಸಾಮಾನ್ಯ ಸ್ಥಿತಿ ನೆಲೆಗೊಂಡಿದೆ ಎಂದು ಬಿಂಬಿಸುವ ಹತಾಶ ಪ್ರಯತ್ನ ಎಂದು ಟ್ವೀಟ್ ಮಾಡಿದ್ದಾರೆ.
Indian PM’s staged visit to IIOJK & laying foundation stones of hydroelectric projects, in contravention of Indus Waters Treaty, is another desperate attempt to project false ‘normalcy’ in occupied territory. We stand with Kashmiris as they rejected the visit & observed Black Day
— Shehbaz Sharif (@CMShehbaz) April 25, 2022
ಪ್ರಧಾನಿ ಮೋದು ಅವರು, ಭಾನುವಾರ ಕಾಶ್ಮೀರ ಕಣಿವೆಗೆ ಭೇಟಿ ನೀಡಿ ಸುಮಾರು 20,000 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.
ಪಾಕಿಸ್ತಾನ ತನ್ನ ಕೆಟ್ಟ ಚಾಳಿಯನ್ನು ಬಿಡುತ್ತಿಲ್ಲ. ಜಮ್ಮು&ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಸಾಕು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ಗಮನಿಸದೆ ಭಾರತದ ಆತಂತರಿಕ ವಿಚಾರದಲ್ಲಿ ಮೂಗು ತೋರಿಸುವುದನ್ನು ಬಿಡುತ್ತಿಲ್ಲ.